ಸೋಜಾ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನೀಚರ್ಸ್ ನಲ್ಲಿ ವಿಜಯವಾಣಿ ವಿಜಯೋತ್ಸವದ ಕೂಪನ್ ಬಿಡುಗಡೆ ಸಮಾರಂಭ

0

ಬೆಳ್ತoಗಡಿ : ಕನ್ನಡಿಗರ ಧ್ವನಿಯಾಗಿರುವ ವಿಜಯವಾಣಿ ಪತ್ರಿಕೆ ಹಾಗೂ 31 ವರ್ಷದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನೀಚರ್ಸ್ ಉತ್ಪನ್ನಗಳ ಮಾರಾಟ ಹಾಗೂ ಸೇವೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಸೋಜಾ ಎಲೆಕ್ಟಾçನಿಕ್ಸ್ ಅಂಡ್ ಫರ್ನೀಚರ್ ಸಂಸ್ಥೆಯ ಸಹಭಾಗಿತ್ವದಲ್ಲಿ ಶಾಪಿಂಗ್ ಹಬ್ಬದ ಸಂಭ್ರಮವನ್ನು ಉತ್ತೇಜಿಸುವ ವಿಜಯವಾಣಿ ವಿಜಯೋತ್ಸವದ ಕೂಪನ್ ಬಿಡುಗಡೆ ಸಮಾರಂಭವು ಅ.13ರಂದು ಸೋಜಾ ಎಲೆಕ್ಟಾçನಿಕ್ಸ್ ಮಳಿಗೆಯಲ್ಲಿ ನಡೆಯಿತು.

ಬೆಳ್ತಂಗಡಿ ವಲಯದ ವಂದನೀಯ ಧರ್ಮ ಗುರು ವಾಲ್ಟರ್ ಡಿ ಮೆಲ್ಲೋ ಅವರ ಶುಭಾಶೀರ್ವಾದದೊಂದಿಗೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಮೋಯ್ದಿನ್ ಬಾವ ಅವರು ಕೂಪನ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಸೋಜಾ ಎಲೆಕ್ಟಾçನಿಕ್ಸ್ ಅಂಡ್ ಫರ್ನೀಚರ್ ಮಳಿಗೆಯ ಮ್ಯಾನೇಜಿಂಗ್ ಡೈರೆಕ್ಟರ್ ಅಲ್ಫೋನ್ಸ್ ಫ್ರಾಂಕೋ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಿರಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೆ. ಎನ್. ಜನಾರ್ಧನ ಅವರು ಭಾಗವಹಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಮನೋಹರ್ ಬಳಂಜ ಅವರು ವಿಜಯೋತ್ಸವದ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿ ರೂ. 2000 ಮತ್ತು ಅದಕ್ಕಿಂತ ಮಿಗಿಲಾಗಿ ಸೋಜಾ ಮಳಿಗೆಯಲ್ಲಿರುವ ಉತ್ಪನ್ನಗಳನ್ನು ಖರೀದಿಸಿ ಕೂಪನ್ ಪಡೆದು ಕಾರು, ಬೈಕ್ ಪಡೆದುಕೊಳ್ಳುವ ಅವಕಾಶದ ಜೊತೆಗೆ ಹಲವಾರು ಬಹುಮಾನಗಳನ್ನು ಗೆಲ್ಲುವ ಈ ವಿಶೇಷ ಆಫರ್‌ನ ಪ್ರಯೋಜನ ಪಡೆದುಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಅಶ್ರಫ್, ಸುದಿತ್ ಕುಂಜರ್ಪ, ಯೋಗಿನಿ, ಸೋಜಾ ಸಂಸ್ಥೆಯ ವ್ಯವಸ್ಥಾಪಕ ಲ್ಯಾನ್ಸಿ ಡಿ ಸೋಜಾ, ಹಾಗೂ ಸಿಬ್ಬಂದಿ ವರ್ಗದವರು ಮತ್ತು ಗ್ರಾಹಕರು ಉಪಸ್ಥಿತರಿದ್ದರು.ಸಂಸ್ಥೆಯ ಸಿಬ್ಬಂದಿಗಳು ಬೈಬಲ್, ಕುರಾನ್ ಹಾಗೂ ಭಗವದ್ಗೀತೆಯ ಸಂದೇಶಗಳನ್ನು ಓದಿ ಪ್ರಾರ್ಥಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಅಲ್ಫೋನ್ಸ್ ಫ್ರಾಂಕೋ ಸ್ವಾಗತಿಸಿ ಪಿಆರ್‌ಒ ಗಳಾದ ಅಬ್ದುಲ್ ಖಾದರ್ ನಿರೂಪಿಸಿ, ಅಮಿನ ಬಿ ಶಬನಾ ವಂದಿಸಿದರು.

LEAVE A REPLY

Please enter your comment!
Please enter your name here