






ಬೆಳ್ತಂಗಡಿ:ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಆಡಳಿತ ಮತ್ತು ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಬಿಜೆಪಿ ಬೆಳ್ತಂಗಡಿ ವತಿಯಿಂದ ಹಮ್ಮಿಕೊಂಡಿರುವ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಪೌರ ಕಾರ್ಮಿಕರನ್ನು ಗೌರವಿಸಿ, ಸ್ವಚ್ಛತಾ ಕಾರ್ಯ ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಸ್ವಚ್ಛತಾ ಸೇನಾನಿಗಳಾದ ಪೌರ ಕಾರ್ಮಿಕರಿಗೆ ಶಾಲು, ಹಾರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಶ್ರಮಿಕ ಕಚೇರಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.ಕುವೆಟ್ಟು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರತ್ನಾಕರ್ ಬಣ್ಣನ್, ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಆಚಾರ್ಯ, ಸುಧೀರ್ ಬಂಡಾರಿ ಕರಿಮನೆಲು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೀತಾರಾಮ್ ಬೆಳಾಲು, ಸಿ.ಕೆ. ಚಂದ್ರಕಲಾ, ಗಣೇಶ ಕುಲಾಲ್ ಕುವೆಟ್ಟು, ಪದ್ಮ ಕುಲಾಲ್ ನಗರ, ವಸಂತ ಶೆಟ್ಟಿ, ಶ್ರೀನಾಥ್, ವಿತೇಶ್, ನಿಮಿತ್, ಧಾಮೋದರ್, ವಸಂತ, ಕಿರಣ್, ಪ್ರಮೀಳಾ ಎಸ್., ಅನಿತಾ ಕೆ. ಕುಕ್ಕೆಡಿ, ಸುಮಿತ್ರ ವಾಮನ, ಸೂರ್ಯ ಪ್ರಸಾದ್, ರಾಜೇಶ್ ಸುದೇಕ್ಕರ್, ರಮೇಶ್ ಬರಾಯ, ಸನತ್, ರಮೇಶ್, ಸೃಜನ್, ಮನೀಶ್, ವಿಕಾಸ್, ಅರ್ಪಿತಾ, ರವೀಂದ್ರ ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು. ಪೌರ ಕಾರ್ಮಿಕರ ಸೇವೆಯನ್ನು ಗೌರವಿಸುವುದರ ಜೊತೆಗೆ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.









