






ಗುರುವಾಯನಕೆರೆ: ಎಕ್ಸೆಲ್ ಪದವಿಪೂರ್ವ ಕಾಲೇಜಿನ 12 ವಿದ್ಯಾರ್ಥಿಗಳು ದೇಶದ ಅತ್ಯಂತ ಪ್ರತಿಷ್ಠಿತ ಸಶಸ್ತ್ರ ಪಡೆಗಳ ತರಬೇತಿ ಸಂಸ್ಥೆಯಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಪ್ರವೇಶ ಪರೀಕ್ಷೆಯ ಮೊದಲ ಸುತ್ತಿನಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಗಳಾಗುವ ಹೆಮ್ಮೆಯ ಕನಸಿನತ್ತ ದಾಪುಗಾಲು ಇಟ್ಟಿದ್ದಾರೆ.
ಎನ್.ಡಿ ಎ ಗೆ ಆಯ್ಕೆಯಾಗಿ ಸಂಸ್ಥೆಗೆ ಕೀರ್ತಿ ತಂದಿರುವ ಸಾಧಕ ವಿದ್ಯಾರ್ಥಿಗಳ ವಿವರ ಹೀಗಿದೆ: ಹರ್ಷಿತಾ ಎನ್., ಅನನ್ಯ ಕೆ. ಪಿ., ಸ್ತುತಿ ಶೀತಲ್ ವಿ., ಹಿತಾರ್ಥ್ ಅಡಮಲೆ, ನಂದೀಶ್ ಟಿ. ಎಸ್., ಮನ್ವಿತ್ ಗೌಡ ಪಿ., ಸುಶಾಂತ್ ಜಿ., ಯಶಸ್ ವಿ., ಎಂ. ಸೋಹನ್ ಶೆಟ್ಟಿ, ಪ್ರಣವ್, ರಾಘವ್ ಎನ್. ಕುಲಾಲ್, ತನಯ್ ಜೋಶಿ.


ವಿದ್ಯಾರ್ಥಿಗಳ ಅಪ್ರತಿಮ ಸಾಧನೆಯನ್ನು ಕೊಂಡಾಡಿರುವ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು, “ದೇಶದ ರಕ್ಷಣಾ ವಿಭಾಗಗಳಾದ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಲು ರಾಷ್ಟ್ರ ಮಟ್ಟದಲ್ಲಿ ನಡೆಯುವ ಈ ಕಠಿಣ ಪರೀಕ್ಷೆಯ ಮೊದಲ ಸುತ್ತಿನಲ್ಲಿ ನಮ್ಮ ಕಾಲೇಜಿನ 12 ವಿದ್ಯಾರ್ಥಿಗಳು ಏಕಕಾಲಕ್ಕೆ ತೇರ್ಗಡೆಯಾಗಿರುವುದು ಹೆಮ್ಮೆಯ ಕ್ಷಣವಾಗಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಉಪನ್ಯಾಸಕರ ಸೂಕ್ತ ಮಾರ್ಗದರ್ಶನ ಹಾಗೂ ಪೋಷಕರ ಬೆಂಬಲವೇ ಈ ಯಶಸ್ಸಿಗೆ ಕಾರಣ. ದೇಶ ಕಾಯುವ ಪವಿತ್ರ ಕಾರ್ಯಕ್ಕೆ ಪ್ರಥಮ ಹೆಜ್ಜೆ ಇಡುತ್ತಿರುವ ನಮ್ಮ ಹೆಮ್ಮೆಯ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಅವರ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗಳು” ಎಂದು ತಿಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್.ಡಿ.ಎ ಸಂಯೋಜಕಜೋಸ್ಟಮ್ ಎ.ಟಿ., ಉಪನ್ಯಾಸಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.










Sir congratulation to cadets who are cleared the NDA EXAM.EXCEL INSTITUTION TAKING THE GOOD STEPS TO MIL COmpitative EXAMS and also give the ssb trg to join tech and medical entry
Officer trg. Awareness trg to agniveer tech as well as GD. I AM VERY HAPPY THIS Institution will be the back bone to Indian defence .
I AM EX SUB OF ARMY CORPS OF SINGNALS