ಬೆಳ್ತಂಗಡಿ ವಕೀಲರ ಸಂಘಕ್ಕೆ ಹೈ ಕೋರ್ಟ್ ಸಂಚಾರಿ ಪೀಠ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಐವನ್ ಡಿಸೋಜಾ ಭೇಟಿ: ಹೈ ಕೋರ್ಟ್ ಸಂಚಾರಿ ಪೀಠ ಸ್ಥಾಪನೆಯ ಸಮಿತಿ ರಚನೆ ಹಿನ್ನೆಲೆ – ಬೆಳ್ತಂಗಡಿಯ ಹೈಕೋರ್ಟ್ ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಿ

0

ಬೆಳ್ತಂಗಡಿ : ಖಡಿಮೆ ಖರ್ಚಿನಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗಾ ಹೈಕೋರ್ಟ್ ಬೆಂಚ್ ಸ್ಥಾಪಿಸಿರುವಂತೆ ಕರಾವಳಿ ಭಾಗಕ್ಕೂ ಹೈ ಕೋರ್ಟ್ ಬೆಂಚ್ ಒದಗಿಸುವಲ್ಲಿ ನಮ್ಮ ಹೋರಾಟ ಮುಂದುವರೆದಿದ್ದು ಎಲ್ಲಾ ಸಂಘ-ಸAಸ್ಥೆಗಳ ಸಹಕಾರ ಬೇಕಿದೆ ಎಂದು ಹೈ ಕೋರ್ಟ್ ಸಂಚಾರಿ ಪೀಠ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಹಾಗೂ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾರವರು ಹೇಳಿದರು.

ಅವರು ಹೈ ಕೋರ್ಟ್ ಸರ್ಕ್ಯುಟ್ ಬೆಂಚ್ ಸ್ಥಾಪನೆ ಬಗ್ಗೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಸಮಿತಿ ರಚಿಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಹೈಕೋರ್ಟ್ ಹೋರಾಟ ಸಮಿತಿಯವರು ಅ.9ರಂದು ವಕೀಲರ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಅವರು ಕರಾವಳಿ ಕರ್ನಾಟಕದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಲು ನಮ್ಮ ಉಭಯ ಜಿಲ್ಲೆಗಳಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಲು ರಾಜ್ಯ ಸರ್ಕಾರವು ಬೆಂಬಲ ವ್ಯಕ್ತಪಡಿಸಿದೆ.

ಹಿಂದಿನ ಮುಖ್ಯಮಂತ್ರಿಯವರು ಮುಖ್ಯ ನಾಯಾಧೀಶರಿಗೆ ಪತ್ರ ಬರೆದು ಈ ಬೇಡಿಕೆ ನೈಜ ಹಾಗೂ ಹಲವು ವರ್ಷಗಳ ಬೇಡಿಕೆಯಾಗಿದ್ದು ಇದಕ್ಕೆ ನನ್ನ ಬೆಂಬಲವಿದೆಯೆAದು ತಿಳಿಸಿದ್ದಾರೆ. ಕರಾವಳಿ ಭಾಗದಿಂದ ಬೆಂಗಳೂರು ಹೈಕೋರ್ಟ್ ತಲುಪಲು ಸುಮಾರು 350-400 ಕಿಲೋ ಮೀಟರ್ ಕ್ರಮಿಸಬೇಕಾಗಿರುವುದು ಸುಲಭದ ಮಾತಲ್ಲ ಎಂದರು.

ಬಾಕಿಯಿರುವ 30ರಿಂದ 40ಕ್ಕೂ ಶೇಕಡಕ್ಕೂ ಹೆಚ್ಚು ಕೇಸುಗಳು ಕರ್ನಾಟಕದ ಕರಾವಳಿ ಭಾಗದ್ದಾಗಿದೆ. ಆದ್ದರಿಂದ ಈ ಸಮಸ್ಯೆಯನ್ನು ಮನಗಂಡು ಹೈ ಕೋರ್ಟ್ ಸಂಚಾರಿ ಪೀಠ ಹೋರಾಟ ಸಮಿತಿಯನ್ನು ರಚನೆ ಮಾಡಿ ಬೇರೆ ಬೇರೆ ನ್ಯಾಯಾಧೀಶರಿಗೆ, ಸರಕಾರಿ ಅಧಿಕಾರಿಗಳಿಗೆ ಕರಾವಳಿ ಭಾಗದಲ್ಲಿ ಹೈ ಕೋರ್ಟ್ ಸಂಚಾರಿ ಪೀಠ ರಚಿಸುವ ಅವಶ್ಯಕತೆಯನ್ನು ಮನದಟ್ಟು ಮಾಡಿದ ಫಲವಾಗಿ 3 ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಕರಾವಳಿ ಜಿಲ್ಲೆಗಳಾದ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳುರು ಮತ್ತು ಕೊಡಗನ್ನು ಭೇಟಿ ಮಾಡಿ ವರದಿ ಸಿದ್ಧಪಡಿಸುತ್ತಿದೆ. ಶೇ.50ರಷ್ಟು ಕೆಲಸ ನಮ್ಮ ಹೋರಾಟ ಸಮಿತಿಯ ಕಡೆಯಿಂದ ಆಗಿದೆ. ಸಂಚಾರಿ ಪೀಠ ಸ್ಥಾಪನೆಯ ಸಮಿತಿಗೆ ಕರಾವಳಿ ಭಾಗದ ಅವಶ್ಯಕತೆ ಏನಿದೆ ಎಂದು ಜನಜಾಗೃತಿಯನ್ನು ಮೂಡಿಸುತ್ತಿದ್ದೇವೆ. ಎಂಆರ್‌ಪಿಎಲ್, ಎನ್‌ಎಂಪಿಟಿ, ವಿದ್ಯಾಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿಗಳ ಸಂಘಟನೆ, ರೈತರ ಸಂಘಟನೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ ಕರಾವಳಿಯಲ್ಲಿ ಪೀಠ ಸ್ಥಾಪನೆಯಾದರೆ ಏನೆಲ್ಲಾ ಪ್ರಯೋಜನಗಳಿದೆ, ಎಷ್ಟು ಕಡಿಮೆ ಖರ್ಚಿನಲ್ಲಿ ನ್ಯಾಯವನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದು ಮನದಟ್ಟು ಮಾಡುತ್ತಿದ್ದೇವೆ. ಬೆಂಗಳೂರು ಹೈ ಕೋರ್ಟ್ಗೆ ತೆರಳಬೇಕಾದ ಸಂದರ್ಭದಲ್ಲಿ ಅಗಾಧವಾದ ಸಮಯ, ಪ್ರಯಾಣ ವೆಚ್ಚ ಹಾಗೂ ಹೆಚ್ಚುವರಿ ವಕೀಲರ ವೆಚ್ಚದಿಂದ ಸಾರ್ವಜನಿಕರು ಹಾಗೂ ಕಕ್ಷಿದಾರರು ನೊಂದಿದ್ದಾರೆ.

ಖಡಿಮೆ ಖರ್ಚಿನಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗಾ ಹೈಕೋಟ್ ಬೆಂಚ್ ಇರುವಂತೆ ಕರಾವಳಿ ಭಾಗಕ್ಕೂ ಹೈ ಕೋರ್ಟ್ ಬೆಂಚ್ ಒದಗಿಸುವಲ್ಲಿ ನಮ್ಮ ಹೋರಾಟ ಮುಂದುವರೆದಿದೆ ಎಂದರು.ಪತ್ರಿಕಾಗೋಷ್ಥಿಯಲ್ಲಿ ದ.ಕ. ಜಿಲ್ಲಾ ಸರಕಾರಿ ವಕೀಲ ಎಂ. ಪಿ. ನೋರೋನ್ಹಾ, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಗೌತಮ್, ದ.ಕ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಿಚರ್ಡ್ ಡಿಕೋಸ್ಟಾ, ಬೆಳ್ತಂಗಡಿಯ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನ ಸಮಿತಿಯ ಅಧ್ಯಕ್ಷ ಬಿ.ಕೆ. ಧನಂಜಯ ರಾವ್, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೊ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ., ಹಿರಿಯ ವಕೀಲರ ಸಮಿತಿಯ ಅಧ್ಯಕ್ಷ ಶಿವಕುಮಾರ್ ಎಸ್. ಎಂ. ಉಪಸ್ಥಿತರಿದ್ದರು.

ಬೆಳ್ತಂಗಡಿ ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರ ಸಮಿತಿಯವರು, ವಕೀಲರುಗಳು ಉಪಸ್ಥಿತರಿದ್ದರು. ಬೆಳ್ತಂಗಡಿಯ ಹೈಕೋರ್ಟ್ ಹೋರಾಟ ಸಮಿತಿಯ ಕಾರ್ಯದರ್ಶಿ ಶೈಲೇಶ್ ಆರ್.ಠೋಸರ್ ಸ್ವಾಗತಿಸಿ, ವಂದಿಸಿದರು.

ಐವಾನ್ ಡಿಸೋಜಾ ಅವರಿಂದ ವಕೀಲರ ಸಂಘಗಳಿಗೆ ಭೇಟಿ ಹೈ ಕೋರ್ಟ್ ಸಂಚಾರಿ ಪೀಠ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಹಾಗೂ ವಿಧಾನ ಪರಿಷತ್ ಶಾಸಕರಾದ ಐವಾನ್ ಡಿಸೋಜಾರವರು ಇಂದು ಬೆಳಿಗ್ಗೆ 10 ಗಂಟೆಗೆ ಮೂಡುಬಿದಿರೆ ವಕೀಲರ ಸಂಘಕ್ಕೆ, 11.30 ಕ್ಕೆ ಬೆಳ್ತಂಗಡಿ ವಕೀಲರ ಸಂಘಕ್ಕೆ, 1 ಗಂಟೆಗೆ ಸುಳ್ಯ ವಕೀಲರ ಸಂಘಕ್ಕೆ ಭೇಟಿ ನೀಡಿದ್ದು, 3 ಗಂಟೆಗೆ ಪುತ್ತೂರು ವಕೀಲರ ಸಂಘಕ್ಕೆ ಹಾಗೂ ಸಂಜೆ 4.30 ಗಂಟೆಗೆ ಬಂಟ್ವಾಳ ವಕೀಲರ ಸಂಘಕ್ಕೆ ಭೇಟಿ ನೀಡಲಿದ್ದಾರೆ.

LEAVE A REPLY

Please enter your comment!
Please enter your name here