ಡಾ. ಪ್ರದೀಪ್ ನಾವೂರು ಅವರ ಮೇಲಿನ ದುಷ್ಕೃತ್ಯ ಖಂಡನೀಯ

0

ನಾವೂರು ಗ್ರಾಮದ ಡಾ. ಪ್ರದೀಪ್ ನಾವೂರು ಅವರು ವೈದ್ಯಕೀಯ ಸೇವೆಯ ಜೊತೆಗೆ ಸಮಾಜದಲ್ಲಿ ಸಂಸ್ಕಾರ, ಧಾರ್ಮಿಕ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಾತ್ವಿಕ ವ್ಯಕ್ತಿ. ಮಕ್ಕಳಲ್ಲಿ ಭಗವದ್ಗೀತೆ ಮತ್ತು ಸಂಸ್ಕಾರ, ಯುವಕರಲ್ಲಿ ಚೈತನ್ಯ ಹಾಗೂ ಹಿರಿಯರಲ್ಲಿ ಗೌರವದ ಮನೋಭಾವ ಬೆಳೆಸುವ ಅವರ ಸೇವೆ ಸಮಾಜಕ್ಕೆ ಅಗತ್ಯವಾಗಿದೆ.

ಇಂತಹ ವ್ಯಕ್ತಿಯ ಸೇವಾ ಕಾರ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರ ಮೇಲೆ ದುಷ್ಕೃತ್ಯ ಎಸಗುವ ಮನೋಭಾವವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಭಿನ್ನಾಭಿಪ್ರಾಯಗಳಿಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ; ಆದರೆ ಹಿಂಸೆ ಮತ್ತು ದುಷ್ಕೃತ್ಯಗಳಿಗೆ ಅವಕಾಶವಿಲ್ಲ.

ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಉತ್ತಮ ಕಾರ್ಯ ಮಾಡುವವರ ಆತ್ಮಸ್ಥೈರ್ಯ ಕುಗ್ಗದಂತೆ ಇಡೀ ಸಮಾಜ ಅವರ ಬೆಂಬಲಕ್ಕೆ ನಿಲ್ಲಬೇಕು.ಡಾ. ಪ್ರದೀಪ್ ನಾವೂರು ಅವರ ಸೇವೆ ಸಮಾಜಕ್ಕೆ ಅಗತ್ಯವಿದೆ. ಅವರೊಂದಿಗೆ ನಾವಿದ್ದೇವೆ.— ಅನಿಲ್ ಕುಮಾರ್ ಯುವಕೀಲರು, ಬೆಳ್ತಂಗಡಿ.

LEAVE A REPLY

Please enter your comment!
Please enter your name here