ಗೋಲ್ಡನ್ ಬುಕ್ ಆಫ್ ವರ್ಲ್ ರೆಕಾರ್ಡ್” ಮಾಡಿದ ಬಾರ್ಯ ಗ್ರಾಮದ ಅದಮ್ಮ ದ ಕು.ರಕ್ಷಾ.ಡಿ ಗೆ ಜಾಗತಿಕ ಬಿಲ್ಲವ ಮಹಾ ಮಂಡಲ ಹಾಗೂ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ)ಬೆಳ್ತಂಗಡಿ ಯಿಂದ ಗೌರವಾರ್ಪಣೆ

0

ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಅದಮ್ಮ ನಿವಾಸಿಯಾದ ದರ್ಣಪ್ಪ ಪೂಜಾರಿ ಮತ್ತು ವನಿತಾ ದಂಪತಿಯ ಪುತ್ರಿ . ರಾಮಕುಂಜದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾದ ಇವರು ತನ್ನ ಕೈಯನ್ನು ಸೊಂಟದಲ್ಲಿ ಹಿಡಿದುಕೊಂಡು ನಿಮಿಷಕ್ಕೆ 179 ಸಲ ಮುಂಗೈಯನ್ನು ಹಿಂದಕ್ಕೆ ಹಾಗೂ ಮುಂದಕ್ಕೆ ಮುಟ್ಟಿಸುವುದರ ಮೂಲಕ ಅತ್ಯಂತ ಕ್ಲಿಷ್ಟಕರವಾದ ಸಾಧನೆಗೈದು “ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ “ದಾಖಲೆಯನ್ನು ಮಾಡಿ ಊರಿಗೆ ಹಾಗೂ ಶಾಲೆಗೆ ಹೆಸರನ್ನು ತಂದಿದ್ದು, ಅವರಿಗೆ ಅ. 6 ರಂದು ಜಾಗತಿಕ ಬಿಲ್ಲವ ಮಹಾಮಂಡಲ ಹಾಗೂ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ದ ವತಿಯಿಂದ ಗೌರವಿಸಲಾಯಿತು.

ಆ ಸಂದರ್ಭದಲ್ಲಿ ಜಾಗತಿಕ ಬಿಲ್ಲವ ಮಹಾಮಂಡಲದ ಪ್ರದಾನ ಕಾರ್ಯದರ್ಶಿ ಶ್ರೀ ಜಯಾನಂದ ಎಂ,ಗುರು ಚಾರಿಟೇಬಲ್ ಕೋಶಾಧಿಕಾರಿ ಭಾಸ್ಕರ ಅಮೀನ್,ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು,ನಿರ್ದೇಶಕಿ ಉಷಾ ಶರತ್ ಬಾರ್ಯ, ಶೇಖರ್ ಪೂಜಾರಿ ಆನಲ್ಕೆ,ಬಾರ್ಯ,ತೆಕ್ಕರ್ ಬಿಲ್ಲವ ಸಂಘದ ಅಧ್ಯಕ್ಷರಾದ ದಿನೇಶ್ ಸುಣ್ಣಾಜೆ, ಪೋಷಕರಾದ ದರ್ಣಪ್ಪ ಪೂಜಾರಿ ಮತ್ತು ವನಿತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here