ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಭಾ ದಿನ

0

ಕಲಿಕೆ ಎನ್ನುವುದು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರದೆ ಪಠ್ಯೇತರ ವಿಷಯಗಳಿಗೆ ಪ್ರೋತ್ಸಾಹ ನೀಡಿದಾಗ ಮಕ್ಕಳ ಸರ್ವಾಂಗಣ ಬೆಳವಣಿಗೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಅಕ್ಟೋಬರ್ 5 ರಂದು ಪ್ರತಿಭಾ ದಿನವನ್ನು ನಡೆಸಲಾಯಿತು.

ಶಾಲಾ ಜೊತೆ ಕಾರ್ಯದರ್ಶಿ ವಂದನೀಯ ವೋಲ್ಟರ್ ಡಿಮೆಲ್ಲೋ ರವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳು ಶಾಲೆಯಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.

ಸಮಾರಂಭದ ಮುಖ್ಯ ಅತಿಥಿ ಮಡಂತ್ಯಾರು ಆಶಾದೀಪ ಮೈನರ್ ಸೆಮಿನರಿಯ ನಿರ್ದೇಶಕ ಗುರು ಅನೂಪ್ ಫೆರ್ನಾಂಡಿಸ್ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕೆಂದರು. ಶಾಲಾ ಮುಖ್ಯೋಪಾಧ್ಯಾಯ ಕ್ಲಿಫರ್ಡ್ ಪಿಂಟೋರವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ ಮಕ್ಕಳಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದರು.

ತೀರ್ಪುಗಾರರಾಗಿ ನಿಶಾ ಪ್ರಸಾದ್, ಪೂಜ ಪ್ರಶಾಂತ್ ಮತ್ತು ಸರಿಡಾ ಡಿಸೋಜ ಆಗಮಿಸಿದ್ದರು. ಸಹ ಶಿಕ್ಷಕಿ ರೆನಿಟ ಲಸ್ರಾದೋ ಮತ್ತು ಜೊನಿಟಾ ಕೊರೆಯ ಅತಿಥಿ ಮತ್ತು ತೀರ್ಪುಗಾರರನ್ನು ಪರಿಚಯಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ವಿದ್ಯಾರ್ಥಿನಿಯರಾದ ರೀಶೆಲ್ ಡಿಸೋಜ ಸ್ವಾಗತಿಸಿ, ನವೀಶ್ ವಂದಿಸಿದರು. ಸ್ಕ್ರತಿ ಮಂದಾರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here