ದಕ್ಷಿಣ ಕನ್ನಡ ಜಿಲ್ಲಾ ಜಿಪಿಟಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಮಾಯ ಶಾಲೆಯ ಜಿಪಿಟಿ ಶಿಕ್ಷಕ ಯೋಗೇಶ್ ಹೆಚ್ ಆರ್ ಅವಿರೋಧ ಆಯ್ಕೆ

0

ಬೆಳ್ತಂಗಡಿ : ಕರ್ನಾಟಕ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಪ್ರಾಥಮಿಕ ವಿಭಾಗದ ಎರಡು ಸಂಘಗಳ ಪೈಕಿ ರಾಜ್ಯದ ಎರಡನೇ ಅತಿದೊಡ್ಡ ಸಂಘ ಕರ್ನಾಟಕ ರಾಜ್ಯ (೬-೮)ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ರಿ) ಬೆಂಗಳೂರು. ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ 2026-31 ರ ಅವಧಿಗೆ ಬೆಳ್ತಂಗಡಿ ತಾಲೂಕಿನ ಮಾಯ ಸ.ಉ.ಪ್ರಾ.ಶಾಲೆ ಇಲ್ಲಿಯ ಜಿಪಿಟಿ ಶಿಕ್ಷಕ *ಯೋಗೇಶ ಹೆಚ್ ಆರ್* ಅಧ್ಯಕ್ಷರಾಗಿ, ಮಂಗಳೂರು ದಕ್ಷಿಣ ತಾಲೂಕಿನ ಪಿಎಂಶ್ರೀ ಕೆಪಿಎಸ್ ನಾಲ್ಯಪದವು, ಶಕ್ತಿನಗರ ಇಲ್ಲಿಯ ಜಿಪಿಟಿ ಶಿಕ್ಷಕ *ಗಜಾನನ ಶೆಟ್ಟಿ* ಪ್ರಧಾನ ಕಾರ್ಯದರ್ಶಿಗಳಾಗಿ ಹಾಗೂ ಬಂಟ್ವಾಳ ತಾಲೂಕು ಪಾಟ್ರಕೋಡಿ ಸ. ಉ ಹಿ ಪ್ರಾ ಶಾಲೆಯ ಜಿಪಿಟಿ ಶಿಕ್ಷಕ *ಗುರುರಾಜ್ ಎನ್* ಕೋಶಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂಬಂಧ ಸಂಘದ ರಾಜ್ಯ ಚುನಾವಣಾ ಅಧಿಕಾರಿಗಳಾದ *ಲಕ್ಷ್ಮೀನಾಥ್ ಎಸ್* ಅವರು ಸೆಪ್ಟಂಬರ್ 20 ರಂದು ಚುನಾವಣಾ ಅಧಿಸೂಚನೆ ಹೊರಡಿಸಿದ್ದರು. ಚುನಾವಣಾ ಮಾರ್ಗಸೂಚಿ ಹಾಗೂ ಸಂಘದ ಬೈಲಾ ನಿಯಮಾವಳಿಗಳಂತೆ ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ತಾಲೂಕುಗಳಲ್ಲಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದು, ಎರಡನೇ ಹಂತದಲ್ಲಿ ನಿರ್ದೇಶಕರುಗಳಿಂದ ತಾಲೂಕು ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಖಜಾಂಚಿಗಳ ಚುನಾವಣೆ ಜರುಗಿತ್ತು. ಇದೀಗ ತೃತೀಯ ಹಂತದಲ್ಲಿ ಜಿಲ್ಲಾ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಪಾಣೆಮಂಗಳೂರು ಶಾರದ ಪ್ರೌಢಶಾಲೆಯಲ್ಲಿ ಅ.2 ರಂದು ನಾಮಪತ್ರ ಸಲ್ಲಿಸುವ ಮೂಲಕ ಪ್ರಾರಂಭಗೊಂಡಿತ್ತು. ಅ.3 ರಂದು ನಾಮಪತ್ರಗಳು ಪರಿಶೀಲಿನೆಗೆ ಒಳಪಟ್ಟಿದ್ದು, ಮೂರು ಹುದ್ದೆಗಳಿಗೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅ. 5 ರಂದು ಸಂಘದ ಜಿಲ್ಲಾ ಚುನಾವಣಾಧಿಕಾರಿ ಧನರಾಜ್ ರವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here