ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ-ಆಕ್ಷೇಪಣೆ ಮತ್ತು ಮುಂದಿನ ವಾದ ನ.7 ಕ್ಕೆ ಮುಂದೂಡಿಕೆ

0

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದಿಂದ ಧರ್ಮಸ್ಥಳ ಕ್ಷೇತ್ರದವರನ್ನು‌ ಸಂತ್ರಸ್ತರೆಂದು ಪರಿಗಣಿಸಬೇಕೆಂದು ಧರ್ಮಸ್ಥಳ ಕ್ಷೇತ್ರದ ಪರ ಸಲ್ಲಿಸಿರುವ ಅರ್ಜಿ ಕುರಿತಾಗಿ ಹಿರಿಯ ವಕೀಲ ಕೆ ಸಿ ನಾಗೇಶ್ ರವರು ಬೆಳ್ತಂಗಡಿ ನ್ಯಾಯಾಧೀಶ ರಾಮಲಿಂಗಪ್ಪ ಮುಂದೆ ವಿಸ್ತೃತವಾಗಿ ಅ.3 ರಂದು ವಾದ ಮಂಡಿಸಿದರು.ಸಂತ್ರಸ್ತ ಅಂದ್ರೆ ಹೇಗೆ ಅನ್ನುವುದರ ಬಗ್ಗೆ ವಿಸ್ತೃತವಾಗಿ ವಾದದಲ್ಲಿ ಉಲ್ಲೇಖಿಸಿದ್ದರು.

ಫೆ.13 ರಂದು ಇದೇ ವಿಷಯವಾಗಿ ವಾದ ಮಂಡಿಸಿದ್ದು ಸಂತ್ರಸ್ತ ಎನ್ನುವುದು ಎಷ್ಟು ವಿಶಾಲವಾಗಿದೆ ಎಂಬುದರ ಬಗ್ಗೆ ಇಂದು ಕೂಡ ವಾದ ಮಂಡನೆ ನಡೆಯಿತು ಎಂದು ಹಿರಿಯ ವಕೀಲ ಮಹೇಶ್ ಕಜೆ ತಿಳಿಸಿದರು.ಈ ಕುರಿತು ಇದರ ಮುಂದಿನ ವಿಚಾರಣೆ ನ.7 ರಂದು ನಡೆಯಲಿದೆ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here