







ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆ, ಉಜಿರೆಯ ವಿದ್ಯಾರ್ಥಿಗಳು ಕೊಕ್ಕಡ ವಲಯ ಹಾಗೂ ಉಜಿರೆ ವಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೊಕ್ಕಡ ವಲಯ ಮಟ್ಟದ 17ರ ವಯೋಮಾನದ ಹಾಗೂ ಉಜಿರೆ ವಲಯ ಮಟ್ಟದ 14ರ ವಯೋಮಾನದ ಅಥ್ಲೆಟಿಕ್ಸ್ ಕ್ರೀಡಾಕೂಟವು ಸರ್ಕಾರಿ ಪ್ರೌಢಶಾಲೆ, ನಿಡ್ಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಣಿಯೂರು-ಕಕ್ಕಿಂಜೆಗಳಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆ, ಉಜಿರೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು:ಮನ್ವಿತ್ ಎಸ್. – ಗುಂಡು ಎಸೆತವರ್ಷ – ಗುಂಡು ಎಸೆತಮನ್ವಿತ್ – ಹರ್ಡಲ್ಸ್ಪ್ರಜ್ವಲ್ – 600 ಮೀಟರ್ ಓಟರಂಜಿನಾ ಬಾನು – ಉದ್ದಜಿಗಿತ ಹಾಗೂ ತ್ರಿವಿಧ ಜಿಗಿತಕೇತನ್ – ಗುಂಡು ಎಸೆತನಿಕೇಶ್ – ತ್ರಿವಿಧ ಜಿಗಿತಲೋಹಿತ್ – ತ್ರಿವಿಧ ಜಿಗಿತರಿಲೇ: ಸ್ವಸ್ತಿಕ್, ಮನೋಜ್ ಹಾಗೂ ಶ್ರವಣ್ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾ ಟಿ. ಅಭಿನಂದನೆ ಸಲ್ಲಿಸಿ, ಮುಂದಿನ ಹಂತದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.
ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಸಾಧಕ ಕ್ರೀಡಾಪಟುಗಳನ್ನು ಅಭಿನಂದಿಸಿದರು.ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಹೇಮುದರ್ ತರಬೇತಿ ನೀಡಿರುತ್ತಾರೆ.









