






ಬೆಳ್ತಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಗುರು ಚಿಂತನ ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದ ಮುಕ್ತ ಭಾಷಣ ಮತ್ತು ಕವನ ಸ್ಪರ್ಧೆಯು ಅ.2 ರಂದು ಬೆಳ್ತಂಗಡಿ ಮುಳಿಯ ಜ್ಯುವೆಲ್ಲರ್ಸ್ ಸಭಾಭವನದಲ್ಲಿ ಜರುಗಿತು.ಕಾರ್ಯಕ್ರಮವನ್ನು ಕೀರ್ತನಾ ಕಲಾ ತಂಡ ಮುಂಡಾಜೆ ಅಧ್ಯಕ್ಷರಾದ ಸದಾನಂದ ಬಿ. ಮುಂಡಾಜೆ ಅವರು ಉದ್ಘಾಟಿಸಿ ಶುಭ ಕೋರಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ಅವರು ವಹಿಸಿ, ಎಲ್ಲರನ್ನು ಸ್ವಾಗತಿಸಿದರು.


ಮುಖ್ಯ ಅತಿಥಿಗಳಾಗಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯ ಪ್ರಾಂಶುಪಾಲರಾದ ಡಾ. ಸವಿತಾ, ಮುಳಿಯ ಜ್ಯುವೆಲ್ಲರ್ಸ್ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕರಾದ ಲೋಹಿತ್ ಕುಮಾರ್, ಗೌರವ ಸಲಹೆಗಾರರಾದ ರಮಾನಂದ ಸಾಲ್ಯಾನ್ ಮುಂಡೂರು, ನಿಕಟಪೂರ್ವ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ, ಪ್ರಧಾನ ಕಾರ್ಯದರ್ಶಿ ಅಶ್ವಿನ್ ಬಿ.ಕೆ., ನಿರ್ದೇಶಕ ಯಶೋಧರ ಮುಂಡಾಜೆ, ಕೋಶಾಧಿಕಾರಿ ಸುಧೀಪ್ ಸವಣಾಲು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರಾದ ರಾಕೇಶ್ ಪೂಜಾರಿ ಮೂಡುಕೋಡಿ, ಅಶ್ವತ್ ಕುಮಾರ್, ಮುಳಿಯ ಉಪಶಾಖಾ ವ್ಯವಸ್ಥಾಪಕ ಸುಧೀರ್ ಕುಮಾರ್, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಜಿತೇಶ್ ಮೊದಲಾದವರು ಉಪಸ್ಥಿತರಿದ್ದರು.ಸ್ಪರ್ಧೆಯಲ್ಲಿ ಒಟ್ಟು 47 ಮಕ್ಕಳು ಭಾಗವಹಿಸಿದ್ದರು. ಕವನ ಸ್ಪರ್ಧೆಯಲ್ಲಿ 14, ಪ್ರೌಢಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ 14 ಮತ್ತು ಕಾಲೇಜು ವಿಭಾಗದ ಭಾಷಣ ಸ್ಪರ್ಧೆಯಲ್ಲಿ 21 ಸ್ಪರ್ಧಿಗಳು ಭಾಗವಹಿಸಿದ್ದರು. ತಾಲೂಕಿನ ವಿವಿಧೆಡೆಯಿಂದ ನೂರಾರು ಸ್ಪರ್ಧಿಗಳು ಆಗಮಿಸಿದ್ದರು.ತೀರ್ಪುಗಾರರಾಗಿ ಎಂ.ಕೆ. ಪ್ರಸಾದ್, ಗುರುದೇವ ಬ್ಯಾಂಕ್ ಸಿಇಓ ಅಶ್ವಥ್ ಹಾಗೂ ಶಿಕ್ಷಕಿ ಸೇವಂತಿ ಅವರು ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮವನ್ನು ಸುಧಾಮಣಿ, ಶೈಲೇಶ್ ಹಾಗೂ ಧನುರಾಜ್ ಅವರು ನಿರೂಪಿಸಿದರು.









