ನೆರಿಯ ಬಯಲು ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ

0

ನೆರಿಯ :ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಯಲು ಇದರ ಆಶ್ರಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ ಸೆ 30. ಬಯಲು ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಗೌಡ ವಹಿಸಿದ್ದರು ನೆರಿಯ ಗ್ರಾಹಕರ ಸಹಕಾರ ಸಂಘದ ಅಧ್ಯಕ್ಷ ರಾಮ್ ಕುಮಾರ್ ಬಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಉದ್ಯಮಿ ಆಂಟನಿ ಪೂವಪ್ಪ ಪೂಜಾರಿ ನಿವೃತ್ತ ಮುಖ್ಯ ಶಿಕ್ಷಕಿ ಫಿಲೋಮಿನಾ ರತ್ನ ಶಿವರಾಜ್ ದೈಹಿಕ ಮಾತೃ ಸಂಘದ ಕಾರ್ಯದರ್ಶಿ ನಿರಂಜನ್ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಹಾಗೂ ಭಜನಾ ತರಬೇತಿದಾರ ನಾಗೇಶ್ ಬಿ ಸಮಿತಿಯ ಸದಸ್ಯ ಆನಂದ.ಬೋವಿನಡಿ. ವಸಂತ ಉಂಬಾಜೆ ಶಾಲಾ ಅಭಿವೃದ್ಧಿ ಸಮಿತಿಯ ಎಲ್ ಕೆ ಜಿ ಯು ಕೆ ಜಿ ಇದರ ಅಧ್ಯಕ್ಷ ದಯಾನಂದ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ರಂಜನ್ ಕುಮಾರ್ ನೆರಿಯ ಶಾಲಾ ಮುಖ್ಯ ಶಿಕ್ಷಕಿ ವೇದಾವತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಗಣೇಶ್ ಭಟ್ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಕ್ರೀಡಾ ತರಬೇತಿದಾರ ಹಾಗೂ ವಾಹನ ಚಾಲಕ ನವೀನ್ ಕುಮಾರ್ ಇವರಿಗೆ ಶಾಲೆ ವತಿಯಿಂದ ಸನ್ಮಾನಿಸಲಾಯಿತು.

ವಿಶೇಷವಾಗಿ ಕರ್ನಾಟಕದಲ್ಲಿ ತುಳು ಭಾಷೆಗೆ ಮಾನ್ಯತೆ ಪಡೆದ ಹಿನ್ನೆಲೆಯಲ್ಲಿ ತುಳು ಸಂಪ್ರದಾಯದಂತೆ ಬಂದಂತೆ ಎಲ್ಲಾ ಅತಿಥಿಗಳಿಗೆ ತುಳುನಾಡಿನ ಶಾಲು ಹಾಗೂ ವೀಳ್ಯದ ಎಲೆ ಮತ್ತು ಅಡಿಕೆ ನೀಡಿ ಗೌರವಿಸಲಾಯಿತು ಕಾರ್ಯಕ್ರಮ ನಡೆಯುವ ವೇದಿಕೆಗೆ ತುಳು ಹೆಸರು ಸೂಚಿಸುವಂತೆ ಶಾಲೆಯಲ್ಲಿ ಶಿಕ್ಷಕರಿಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು ಬೈಲ ಸಿರಿ ಚಾವಡಿ ಎಂದು ಹೆಸರನ್ನು ಸೂಚಿಸಿದ ಶಾಲಾ ಶಿಕ್ಷಕಿ ಶಿಲ್ಪ ಇವರಿಗೆ ಬಹುಮಾನ ನೀಡಲಾಯಿತು ಅಣಿಯೂರು ಕ್ಲಸ್ಟರ್ ಸಿ ಆರ್ ಪಿ ದೇವಸ್ಯ ಸಿಎ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಯಲು ಶಾಲೆಯ ಮುಖ್ಯ ಶಿಕ್ಷಕ ಗೋವಿಂದ ನಾಯ್ಕ ಬಿ ಸ್ವಾಗತಿಸಿ ಶಿಕ್ಷಕ ಓಂಕಾರ ಮೂರ್ತಿ ಧನ್ಯವಾದ ಸಮರ್ಪಿಸಿದರು ವಲಯ ಮಟ್ಟದ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಬದನಾಜೆ ಉಜಿರೆ ಹಾಗೂ ತೃತೀಯ ಸ್ಥಾನವನ್ನು ಸರ್ಕಾರಿ ಪ್ರಾಥಮಿಕ ಶಾಲೆ , ಹಳೆಪೇಟೆ ಉಜಿರೆ ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಸರ್ಕಾರಿ ಪ್ರಾಥಮಿಕ ಶಾಲೆ, ಕುಕ್ಕಾವು ದ್ವಿತೀಯ ಸ್ಥಾನವನ್ನು ಬದನಾಜೆ ಉಜಿರೆ ಶಾಲೆ ಪಡೆದುಕೊಂಡಿದೆ

LEAVE A REPLY

Please enter your comment!
Please enter your name here