ಬೆಳ್ತಂಗಡಿ ಸರಕಾರಿ ಪ್ರೌ.ಶಾಲೆಯಲ್ಲಿ ರೂ. 12 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶೌಚಾಲಯ ಕಟ್ಟಡದ ಉದ್ಘಾಟನೆ

0

ಬೆಳ್ತಂಗಡಿ : ರೂ. 12 ಲಕ್ಷ ವೆಚ್ಚದಲ್ಲಿ ಎಂ.ಆರ್.ಪಿ.ಎಲ್. ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣಗೊಂಡಿರುವ ಬೆಳ್ತಂಗಡಿ ಸರಕಾರಿ ಪ್ರೌಢ ಶಾಲೆಯ ಶೌಚಾಲಯ ಕಟ್ಟಡದ ಉದ್ಘಾಟನೆಯನ್ನು ಸೆ.30ರಂದು ಕ್ಯಾ.ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.

ಶಾಸಕ ಹರೀಶ್ ಪೂಂಜಾ ಮಾತನಾಡಿ, ಕಳೆದ ಅವಧಿಯಲ್ಲಿ ಸುಮಾರು ಇಲ್ಲಿಯ ಪಿಯು ವಿಭಾಗಕ್ಕೆ 3.5 ಕೋಟಿ ವೆಚ್ಚದಲ್ಲಿ ಸುಂದರ ಕಟ್ಟಡ ನಿರ್ಮಾಣವಾಗುತ್ತಿದೆ. ಸಿಎಸ್‌ಆರ್ ಫಂಡ್‌ನಿAದ ಶಾಲೆಯ ಅಭಿವೃದ್ಧಿಗೆ ಸಹಕಾರ ಸಿಕ್ಕಿದೆ. ಶಾಲೆಯ ಅಭಿವೃದ್ಧಿಗೆ ಮುಖ್ಯ ಶಿಕ್ಷಕರ ಜೊತೆಗೆ ಅನುಭವಿ ಶಿಕ್ಷಕರ ತಂಡದ ಪಾತ್ರವೂ ಬಹಳಷ್ಟಿದೆ. ಎಂ.ಆರ್.ಪಿ.ಎಲ್. ಸಿಎಸ್‌ಆರ್ ನಿಧಿಯಿಂದ ಪ್ರೌಢಶಾಲಾ ವಿಭಾಗದ 3 ತರಗತಿ ಕೋಣೆಗಳ ನಿರ್ಮಾಣಕ್ಕೆ ರೂ.45 ಲಕ್ಷ ಹಾಗೂ ಶೌಚಾಲಯ ನಿರ್ಮಾಣಕ್ಕೆ ರೂ.12ಲಕ್ಷ ನೀಡಿರುವುದಕ್ಕೆ ಅಭಿನಂದನೆಗಳು.

ಇಲ್ಲಿಯ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸುಕುಮಾರ್ ಜೈನ್ ಅವರ ಅವಿರತ ಶ್ರಮವೂ ಮೆಚ್ಚುವಂತಹದ್ದು ಎಂದರು.ಸAಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಒಟ್ಟು ಜಿಲ್ಲೆಯಲ್ಲಿ ಸರಕಾರಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ಗ್ರಾಮದ ವ್ಯಾಪ್ತಿಯಲ್ಲಿ 4-5 ಶಾಲೆಗಳಿರುವುದರಿಂದ ಸಿಎಸ್‌ಆರ್ ಅನುದಾನದಿಂದಲೇ ಶಾಲಾಭಿವೃದ್ಧಿ ಮಾಡುವುದು ಅಸಾಧ್ಯ. ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇರುವುದರಿಂದ ಊರ ದಾನಿಗಳು, ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಹಕಾರ ನೀಡಬೇಕು. ಇತ್ತೀಚೆಗೆ ಅಂಗನವಾಡಿಗಳ ಅಭಿವೃದ್ಧಿಗೆ ಒತ್ತು ನೀಡುತ್ತಿರುವುದರಿಂದ ಶಾಲೆಗಳಿಗೆ ಅನುದಾನವನ್ನು ಪೂರೈಸುವುದು ಸವಾಲಾಗಿದೆ. ಆದರೂ ಈ ಶಾಲೆಯ ಅವಶ್ಯಕತೆಗಳನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ. ಶಾಲೆಗೆ ಯಾವುದಾದರೂ CSR ಅನುದಾನದಿಂದ ಇನ್ನು 5 ತರಗತಿ ಕೋಣೆಗಳ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡುವ ಭರವಸೆ ನೀಡುತ್ತೇನೆ ಎಂದರು.

ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಜಯಾನಂದ ಗೌಡ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ, ಬೆಳ್ತಂಗಡಿ ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಸುಕುಮಾರ್ ಜೈನ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಸುದೇವ ಸೋಮಯಾಜಿ, ಸದಸ್ಯ ಪ್ರಮೋದ್ ಕುಮಾರ್ ನಾಯಕ್, ಎಸ್ಡಿಎಂಸಿ ಕಾರ್ಯಾಧ್ಯಕ್ಷ ಸೂರಪ್ಪ, ಎಸ್‌ಡಿಎಮ್‌ಸಿ ಸದಸ್ಯರು, ಉಪನ್ಯಾಸಕರು, ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮಂಗಳೂರು ಬಿಜೆಪಿ ಸಹಪ್ರಭಾರಿ ಜಯಂತ್ ಕೋಟ್ಯಾನ್, ವೇಣೂರು ಪ್ರಾ.ಕೃ.ಪ.ಸ.ಸಂಗದ ಅಧ್ಯಕ್ಷ ಸುಂದರ ಹೆಗ್ಡೆ, ಪ.ಪಂ ಮಾಜಿ ಸದಸ್ಯ ಶರತ್, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ, ಗಣೇಶ್ ಲಾಯಿಲ ಗ್ರಾ.ಪಂ ಸದಸ್ಯ ಗಣೇಶ್, ಅರವಿಂದ್ ಲಾಯಿಲ, ವಕೀಲ ಅನಿಲ್ ಕುಮಾರ್, ಜಗದೀಶ್ ಕನ್ನಾಜೆ, ಕರುಣಾಕರ್ ಬಂಗೇರ, ಅಭಿಲಾಷ್, ಪವನ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here