ಶ್ವೇತ ಸಮೂಹ’ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

‘ಕಣಿಯೂರು: ಶ್ವೇತ ಸಮೂಹ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2025- 26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷೆ ಚೈತ್ರಾ ಯಂ.ಜಿ. ಅವರ ಅಧ್ಯಕ್ಷತೆಯಲ್ಲಿ ಸೆ.18ರಂದು ಪಿಲಿಗೂಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ವಿಸ್ತರಣಾಧಿಕಾರಿ ರಾಜೇಶ್ ಪಿ. ಕಾಮತ್ ಮಾರ್ಗದರ್ಶನ ನೀಡಿ ತಾಲೂಕಿನ ಎರಡನೇ ಅತಿ ದೊಡ್ಡ ಮಾಹಿಳಾ ಸಂಘದಲ್ಲಿ 2.5 ಸಾವಿರ ಲೀಟರ್ ಹಾಲು ಸಂಗ್ರಹಣೆ ಆಗುತ್ತಿರುವುದು ಗಮನರ್ಹ ಇಲ್ಲಿನ ಸಂಘದ ಸದಸ್ಯೆ ಜಮೀಲಾ ಅವರು ರಾಜ್ಯಮಟ್ಟದಲ್ಲಿ ಗುರುತಿಸಿರುವುದು ಸಂಘವು ಜನಜ್ಜನಿತವಾಗಿದೆ. ಸಂಘದ ಪ್ರಗತಿ ಪಥದಲ್ಲಿ ಸಾಗುತ್ತಿದ್ದು ಎಂದು ಹೇಳಿದ ಅವರು ಸಂಘದ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷೆ ಚೈತ್ರಾ ಯಂ.ಜಿ. ಮಾತನಾಡಿ, ಸಂಘದಲ್ಲಿ 2700 ಲೀಟರ್ ಹಾಲು ಸಂಗ್ರಹಣೆ ಆಗುತ್ತಿದ್ದು, ಲೆಕ್ಕ ಪರಿಶೋಧನೆಯಲ್ಲಿ ‘ಎ’ ಗ್ರೇಡ್ ಪಡೆದಿದ್ದು, ವರದಿ ಸಾಲಿನಲ್ಲಿ 7.69 ಲಕ್ಷ ಲೀಟರ್ ಹಾಲು ಸಂಗ್ರಹಣೆಗೊಂಡು ರೂ.1418892.60 ಲಕ್ಷ ನಿವ್ವಳ ಲಾಭ ಗಳಿಸಿ, ಸದಸ್ಯರಿಗೆ ಲೀಟರ್‌ಗೆ 0.88 ಪೈಸೆ ಬೋನಸ್ ನೀಡಲಾಗುವುದು ಎಂದರು.

ಸಂಘದ ಸ್ಥಾಪಕಾಧ್ಯಕ್ಷೆ ರಾಜಶ್ರೀ ಹೆಗ್ಡೆ, ಉಪಾಧ್ಯಕ್ಷೆ ಪ್ರೇಮಾ ಸಿ, ನಿರ್ದೇಶಕರಾದ ಗಿರಿಜಾ, ರಾಜೀವಿ, ಪ್ರೇಮಾ, ಮಮತಾ, ಕುಸುಮವಾತಿ, ಹೇಮಲತಾ, ಇಂದಿರಾ, ನಳಿನಾಕ್ಷಿ, ಅಪ್ಪಿ ಹಾಗೂ ಸುನಂದಾ, ಮಾಜಿ ಅಧ್ಯಕ್ಷರಾದ ಭವಾನಿ ಮತ್ತು ಕುಸುಮಾವತಿ ಉಪಸ್ಥಿತರಿದ್ದರು.ಎಸ್ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.

ಅಧಿಕ ಹಾಲು ಉತ್ಪಾದಿಸಿ ಡಿಪ್ಪೋಗೆ ಹಾಕಿದ ಜಮೀಲಾ ಪ್ರಥಮ, ಸುಮಾ ಬಿ.ಎಸ್ ದ್ವಿತೀಯ, ವಿಮಲ ತೃತೀಯ ಸ್ಥಾನ ಪಡೆದ ಅವರಿಗೆ ಬಹುಮಾನ ನೀಡಿ ಪ್ರೋತ್ಸಾಹ ನೀಡಲಾಯಿತು. ಪೂರ್ಣಿಮಾ, ಲಕ್ಷ್ಮೀ, ವಿಶಾಲಾಕ್ಷಿ ಹಾಗೂ ಸೀತಮ್ಮ ಅವರನ್ನು ಗೌರವಿಸಲಾಯಿತು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಕೆ. ಸ್ವಾಗತಿಸಿ ವರದಿ ನಿರ್ದೇಶಕಿ ವಾಚಿಸಿದರು. ವೈಶಾಲಿ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳಾದ ದೇವಕಿ, ಆನಂದ ಹಾಗೂ ಹರ್ಷಿತ ಎಲ್. ಆರ್. ಸಹಕರಿಸಿದರು.

LEAVE A REPLY

Please enter your comment!
Please enter your name here