ಕಾಡಾನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಗೌಡ ಮನೆಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ

0

ರೆಖ್ಯ : ಕಾಡಾನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಗೌಡ ಅವರ ಮನೆಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮೃತ ಬಾಲಕೃಷ್ಣ ಗೌಡ ಅವರ ಪುತ್ರಿ ಯಕ್ಷತಾ ಅವರೊಂದಿಗೆ ಮಾತುಕತೆ ನಡೆಸಿದ ಸಂಸದರು, ಧೈರ್ಯದಿಂದ ಕುಟುಂಬವನ್ನು ಮುನ್ನಡೆಸುವಂತೆ ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಎದುರಾದರೂ ತಾವು ಹಾಗೂ ತಮ್ಮ ತಂಡ ಸದಾ ಕುಟುಂಬದ ನೆರವಿಗೆ ಇರುವುದಾಗಿ ಭರವಸೆ ನೀಡಿದರು.ಮೃತರ ಕುಟುಂಬದ ಪರಿಸ್ಥಿತಿ ಹಾಗೂ ಯಕ್ಷತಾ ಅವರ ಮುಂದಿನ ಭವಿಷ್ಯದ ಕುರಿತು ಸಂಸದರು ವಿಶೇಷವಾಗಿ ಚರ್ಚಿಸಿದರು. ಕುಟುಂಬಕ್ಕೆ ಅಗತ್ಯವಿರುವ ನೆರವು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ವಿಚಾರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ನವೀನ್ ರೆಖ್ಯ,ಬೇಬಿ ಕಿರಣ್, ಚೇತನ್ ಕೊಳೆಚ್ಚಾವು, ಹರ್ಷಿತ್ ಊರ್ನಡ್ಕ, ರಕ್ಷಿತ್ ಇಡ್ಮಾಲ್, ಅಖಿಲ್ ರೆಖ್ಯ, ಧನಂಜಯ ಪರ್ಣಡ್ಕ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here