






ಕೈಕಂಬ: ಪೆರ್ಲಿಯ ನರ್ಸಿಂಗ್ ಹೋಮ್, ಕೈಕಂಬ, ಬಿ.ಸಿ.ರೋಡ್ ವತಿಯಿಂದ ಉಚಿತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ಅ.4 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಪೆರ್ಲಿಯ ನರ್ಸಿಂಗ್ ಹೋಮ್, ಕೈಕಂಬ, ಬಿ.ಸಿ.ರೋಡ್ ಆಯೋಜಿಸಲಾಗಿದೆ.


ಮಕ್ಕಳ ತಜ್ಞ ಡಾ. ಡೈಲನ್ ಡಿಸೋಜಾ ನೇತೃತ್ವದಲ್ಲಿ ಶಿಬಿರ ನಡೆಯಲಿದ್ದು, ಮಕ್ಕಳ ತೂಕ, ಬೆಳವಣಿಗೆ, ಜ್ವರ, ಕೆಮ್ಮು, ನೆಗಡಿ, ಅತಿಸಾರ, ಅಲರ್ಜಿ, ಜೀರ್ಣಕ್ರಿಯೆ ಸಮಸ್ಯೆಗಳು ಸೇರಿದಂತೆ ಸಾಮಾನ್ಯ ಆರೋಗ್ಯ ಸಮಸ್ಯೆಗಳ ತಪಾಸಣೆ ಹಾಗೂ ವೈದ್ಯಕೀಯ ಸಲಹೆ ನೀಡಲಾಗುವುದು. ಮಕ್ಕಳ ಆಹಾರ, ಪೌಷ್ಟಿಕಾಂಶ, ಲಸಿಕೆ ಹಾಗೂ ಆರೋಗ್ಯಕರ ಬೆಳವಣಿಗೆ ಕುರಿತು ಪೋಷಕರಿಗೆ ಮಾರ್ಗದರ್ಶನ ನೀಡಲಾಗುವುದು.
18 ವರ್ಷದೊಳಗಿನ ಮಕ್ಕಳಿಗೆ ಉಚಿತ ತಪಾಸಣೆ ಹಾಗೂ ಸಲಹೆ ಲಭ್ಯ. ವೈದ್ಯರು ಸೂಚಿಸುವ ರಕ್ತ ಪರೀಕ್ಷೆ, ಎಕ್ಸ್‌ರೇ ಸೇರಿದಂತೆ ಪ್ರಯೋಗಾಲಯ ಪರೀಕ್ಷೆಗಳಿಗೆ ಶೇ.40 ರಿಯಾಯಿತಿ ಇರುತ್ತದೆ.ನೋಂದಣಿಗೆ 8296321077 ಸಂಪರ್ಕಿಸಿ.









