






ಬೆಳ್ತಂಗಡಿ : ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಸಪ್ಟೆಂಬರ್ ತಿಂಗಳ ಕಾರ್ಯಕಾರಿ ಸಮಿತಿ ಸಭೆಯು ಸೆ.27ರಂದು ಸಂಘದ ಕಾರ್ಯದರ್ಶಿಯವರಾದ ಸುರೇಶ್ ಎಚ್. ಎಲ್. ರವರ ನೇತೃತ್ವದಲ್ಲಿ ಪಿಲಿಗೂಡು ಶರತ್ ಕುಮಾರ್ ರವರ ಸ್ಟುಡಿಯೋದಲ್ಲಿ ಸಂಘದ ಅಧ್ಯಕ್ಷ ಸತೀಶ್ ಹೆಚ್. ಎಲ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಆ.30ರಂದು ನಡೆದ ವಾರ್ಷಿಕ ಮಹಾಸಭೆಯ ವರದಿ ಹಾಗೂ ಲೆಕ್ಕಪತ್ರವನ್ನು ಓದಿ ಹೇಳಲಾಯಿತು. ಕಲ್ಮಂಜ ಹಾಗೂ ಮುಂಡಾಜೆ ಗ್ರಾಮ ಸಮಿತಿಯನ್ನು ಮಾ.29ರಂದು ಉರುವಾಲು, ಇಳಂತಿಲ ಮತ್ತು ಮೊಗ್ರು ಗ್ರಾಮಗಳ ಗ್ರಾಮ ಸಮಿತಿಯನ್ನು ಆ.26ರಂದು ತಣ್ಣೀರುಪಂಥ, ಕರಾಯ ಗ್ರಾಮ ಸಮಿತಿಯನ್ನು ಸೆ.17ರಂದು ರಚಿಸಿದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಕಣಿಯೂರು ಗ್ರಾಮ ಸಮಿತಿಯನ್ನು ಅ.11ರಂದು ಕಣಿಯೂರು ಮಹಾಮಾಯಿ ಸಭಾಭವನದಲ್ಲಿ ರಚಿಸುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.


ತಾಲೂಕು ಮರಾಟಿ ಸಮುದಾಯ ಭವನ ನಿರ್ಮಾಣದ ಬಗ್ಗೆ ತಾಲೂಕಿನ ಮರಾಟಿ ಸಮಾಜ ಬಾಂಧವರ ಪ್ರತೀ ಮನೆಗೆ ವಿಜ್ಞಾಪನ ಪತ್ರ ತಲುಪಿಸುವುದೆಂದು ನಿರ್ಣಯಿಸಲಾಯಿತು. ಸಂಘಕ್ಕೆ ಉದಾರವಾಗಿ ನೀಡಿದ ಜಮೀನಿನ ಪಹಣಿ ಪತ್ರ ಮತ್ತು ಸರಕಾರದ ಮಟ್ಟದಲ್ಲಿ ಜಮೀನಿನ ನಿರಾಕ್ಷೇಪನ ಪತ್ರ ಪಡೆಯುವರೆ ತಗುಲಬಹುದಾದ ಖರ್ಚು ವೆಚ್ಚದ ಬಗ್ಗೆ ಚರ್ಚಿಸಲಾಯಿತು.
ಸಂಘದ ಜಮೀನಿನಲ್ಲಿ ಮೂಲಭೂತ ಸೌಕರ್ಯ ನಿರ್ಮಿಸುವುದಕ್ಕಾಗಿ ಈಗಾಗಲೇ ಶಾಸಕರಲ್ಲಿ ಮನವಿ ಮಾಡಲಾಗಿದ್ದು, ಅ.2ರಂದು ಸಂಘದ ಎಲ್ಲಾ ಪದಾಧಿಕಾರಿಗಳು ಶಾಸಕರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಲಾಗುವುದೆಂದು ತೀರ್ಮಾನಿಸಲಾಯಿತು.ಸಭೆಯಲ್ಲಿ ಸುರೇಶ್ ಹೆಚ್.ಎಲ್. ಸ್ವಾಗತಿಸಿ ಧನ್ಯವಾದವಿತ್ತರು.
ಮುಂದಿನ ತಿಂಗಳ ಕಾರ್ಯಕಾರಿ ಸಮಿತಿ ಸಭೆಯನ್ನು ಜೊತೆಕಾರ್ಯದರ್ಶಿಯವರಾದ ಪವಿತ್ರ ಲೋಕೇಶ್ ರವರ ಉಸ್ತುವಾರಿಯಲ್ಲಿ ನಡೆಸುವುದೆಂದು ತೀರ್ಮಾನಚಲಾಯಿತು . ಸಭೆಯಲ್ಲಿ ಉಪಾಧ್ಯಕ್ಷರಾದ ಪ್ರಭಾಕರ್ ನಾಯ್ಕ , ಸಂಘಟನಾ ಕಾರ್ಯದರ್ಶಿಯವರಾದ ಪ್ರಸಾದ್ ನಾಯ್ಕ,ಕಾರ್ಯದರ್ಶಿಯಾದ ಸುರೇಶ್ ಹೆಚ್. ಎಲ್., ಕೋಶಾಧಿಕಾರಿ ಹರೀಶ್ ಪೆರಾಜೆ, ಮಾಧ್ಯಮ ಕಾರ್ಯದರ್ಶಿಯವರಾದ ಶರತ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ, ರಾಜೇಶ್, ರಜನೀಶ್, ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.









