






ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜು, ನಿಟ್ಟಡೆ–ವೇಣೂರು ಇಲ್ಲಿನ 2ನೇ ತರಗತಿಯ ವಿದ್ಯಾರ್ಥಿ ಮಾಸ್ಟರ್ ದಕ್ಷಿತ್*ಅವರ ಹುಟ್ಟುಹಬ್ಬದ ಪ್ರಯುಕ್ತ, ಅವರ ಹೆತ್ತವರಾದ ಹಾಗೂ ಕುಂಭಶ್ರೀ ವೈಭವ ಸಮಿತಿಯ ಉಪಾಧ್ಯಕ್ಷ ಜನಾರ್ದನ ಮತ್ತು ಚಿತ್ರಕಲಾ ಅವರು ಕುಂಭಶ್ರೀ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪಾಯಸ ವಿತರಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ.ಎಚ್., ಸಂಚಾಲಕ ಅಶ್ವಿತ್ ಕುಲಾಲ್ ಹಾಗೂ ಶಿಕ್ಷಕ ವೃಂದದವರು ಮಾಸ್ಟರ್ ದಕ್ಷಿತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದರು.









