ಹತ್ಯಡ್ಕ ಮುದ್ದಿಗೆಯಲ್ಲಿ 11 ವರ್ಷ ಸೇವೆ ಸಲ್ಲಿಸಿದ ಪವರ್‌ಮ್ಯಾನ್ ಉಮೇಶ್‌ಗೆ ಆತ್ಮೀಯ ಬೀಳ್ಕೊಡುಗೆ

0

ಹತ್ಯಡ್ಕ: ಹತ್ಯಡ್ಕ ಮುದ್ದಿಗೆ ಭಾಗದಲ್ಲಿ ಕಳೆದ 11 ವರ್ಷಗಳಿಂದ ಪವರ್‌ಮ್ಯಾನ್‌ (ಲೈನ್‌ಮ್ಯಾನ್‌) ಆಗಿ ಸೇವೆ ಸಲ್ಲಿಸಿ, ಇದೀಗ ತಮ್ಮ ಹುಟ್ಟೂರಿಗೆ ವರ್ಗಾವಣೆಗೊಂಡಿರುವ ಉಮೇಶ್ ಅವರನ್ನು ಮುದ್ದಿಗೆ ಗ್ರಾಮಸ್ಥರ ಪರವಾಗಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಉಮೇಶ್ ಅವರನ್ನು ಸನ್ಮಾನಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರತ್ನಾ ಕೆ., “ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ, ವೃತ್ತಿಯನ್ನು ಕೇವಲ ವೃತ್ತಿಯಾಗಿ ನೋಡದೆ ಪ್ರವೃತ್ತಿ ಮನೋಭಾವನೆಯಿಂದ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದೀರಿ. ಮುಂದಿನ ನಿಮ್ಮ ಸೇವಾ ಜೀವನ ಯಾವುದೇ ನೋವುಗಳಿಲ್ಲದೆ ಸುಖಮಯವಾಗಿರಲಿ” ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ರಹೀಮ್ ಎಂ.ಆರ್., ಮಹೇಶ್ ಶೆಟ್ಟಿ, ಕರುಣಾಕರ ಗೌಡ, ಸುಂದರ ಎಚ್., ಕೇಶವ ಗೌಡ, ಕುಮರೇಶ್, ಸುಂದರ ಗೌಡ, ನೇತ್ರಾವತಿ, ಪ್ರತಿಮಾ ಗೌಡ, ರಾಜೇಶ್ ಬೊಳ್ಳೋಡಿ, ಗಣೇಶ ರಾಣೆಯರ್, ಕೃಷ್ಣ ಶೆಟ್ಟಿಗಾರ್, ಕಮಲ ಕೊಪ್ಪ, ರಿತ್ವಿಕ್ ರಾಣೆಯರ್, ಪ್ರೇಮಚಂದ್ರ ಕೆ. ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here