






ಬೆಳಾಲು: ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಶ್ರೀ ಕ್ಷೇತ್ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಹಾಗೂ ದೇವಸ್ಥಾನದ ಗೌರವ ಮಾರ್ಗದರ್ಶಕ ಯು. ಶರತ್ಕೃಷ್ಣ ಪಡ್ವೆಟ್ನಾಯರ ಮಾರ್ಗದರ್ಶನದಲ್ಲಿ ವರ್ಷಂಪ್ರತಿ ಜರುಗುವಅನಂತ ಚತುರ್ದಶಿ (ನೋಂಪು) ಪೂಜೆ ಮತ್ತು ಲಕ್ಷ ತುಳಸಿ ಅರ್ಚನೆ ಜರಗಿತು.
ಬೆಳಿಗ್ಗೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ ಕಲ್ಯೋಕ್ತ ಪೂಜೆ, ಊರ ಪರ ಊರ ಮುತ್ತೈದೆಯರಿಂದ ಲಕ್ಷ ತುಳಸಿ ಅರ್ಚನೆ, ತೆನೆ ತಂದು ಪೂಜೆ, ಬಲಿವಾಡು ಸೇವೆ.ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು.ರಾತ್ರಿ ದೇವರಿಗೆ ರಂಗ ಪೂಜೆ, ಬಳಿಕ ಊರ ಮಕ್ಕಳಿಂದ ನೃತ್ಯ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು, ಅಸ್ರನ್ನರು, ಅರ್ಚಕ ವೃಂದ ಶ್ರೀ ಅನಂತೇಶ್ವರ ಭಜನಾ ಮಂಡಳಿ, ಮಹಿಳಾ ಸೇವಾ ಸಮಿತಿ ಪದಾಧಿಕಾರಿಗಳು,ಹದಿನಾಲ್ಕು ಬೈಲುವಾರು ಸಮಿತಿಯಪ್ರಧಾನ ಸಂಚಾಲಕರು ಹಾಗೂ ಸಂಚಾಲಕರು, ಸಿಬ್ಬಂದಿ ವರ್ಗ ವಲಯದವರು, ಊರವರು ಉಪಸ್ಥಿತರಿದ್ದು ಸಹಕರಿಸಿದರು.









