






ಸುಬ್ರಮಣ್ಯ: ಕುಕ್ಕೆ ಸುಬ್ರಮಣ್ಯ ಮಠದ ಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾದ ಧರ್ಮಸ್ಥಳ ಭಜನಾ ಕಮ್ಮಟದ ನಿಯೋಗವು, ಮುಂಬರುವ ಭಜನಾ ಕಮ್ಮಟದ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ನೀಡಿ ಆಶೀರ್ವಾದ ಪಡೆದುಕೊಂಡರು.


ಭಜನಾ ಕಮ್ಮಟದ ಸಂಚಾಲಕರಾದ ಸುಬ್ರಮಣ್ಯ ಪ್ರಸಾದ್ ಹಾಗೂ ಪ್ರಮುಖ ಸದಸ್ಯರಾದ ಕೇಶವ ಗೌಡ, ಮೋಹನ ಶೆಟ್ಟಿ, ಸತೀಶ್ ಪೈ ಮತ್ತು ಸುದರ್ಶನ್ ಜೈನ್ ಉಪಸ್ಥಿತರಿದ್ದರು.









