ಇಸ್ರೇಲ್ ನಲ್ಲಿ 19ನೇ ವರ್ಷದ ಗಣೇಶೋತ್ಸವ ಸಂಭ್ರಮ

0

ಬೆಳ್ತಂಗಡಿ: ಇಸ್ರೇಲ್ ನ ಟೆಲ್ ಅವೀವ್ ಲೂನಾ ಪಾರ್ಕ್ ನಲ್ಲಿ 19ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳ ನೂರಾರು ಮಂದಿ ಇಸ್ರೇಲ್ ನಲ್ಲಿ ಉದ್ಯೋಗದಲ್ಲಿದ್ದು, ಒಗ್ಗೂಡಿ ತಮ್ಮ ಮನೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆಯಿಂದ ಭಜನೆ, ಕುಣಿತ ಭಜನೆ, ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ವಿಶೇಷವಾಗಿ ತುಳುನಾಡಿನ ನೆಲಮೂಲ ಸಂಸ್ಕೃತಿಯಾದ ಯಕ್ಷಗಾನ, ಹುಲಿಕುಣಿತ ಪ್ರದರ್ಶನ ಬಹಳ ವಿಜೃಂಭಣೆಯಿಂದ ನೆರವೇರಿತು.

LEAVE A REPLY

Please enter your comment!
Please enter your name here