






ಬೆಳ್ತಂಗಡಿ: ರಾಷ್ಟ್ರ ಕಂಡ ಅತ್ಯುತ್ತಮ ನಾಯಕ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾದ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ, ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ವತಿಯಿಂದ ಕಳೆಂಜ ಗ್ರಾಮದ ನಂದಗೋಕುಲ ಗೋಶಾಲೆಯ ಗೋವುಗಳ ಗೋಗ್ರಾಸಕ್ಕಾಗಿ (ಮೇವಿಗಾಗಿ) ರೂ. 10,506/- ಗಳ ಧನಸಹಾಯವನ್ನು ನೀಡಲಾಯಿತು.


ದೇಶವನ್ನು ಮುನ್ನಡೆಸುವ ಪ್ರಧಾನಿ ಮೋದಿಯವರಿಗೆ ಆಯುರಾರೋಗ್ಯ, ಐಶ್ವರ್ಯ ಹಾಗೂ ದೃಢ ಶಕ್ತಿ ಸಿಗಲಿ ಮತ್ತು ಗೋಮಾತೆಯ ಅನುಗ್ರಹ ಸದಾ ಇರಲಿ ಎಂದು ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿಗಳಾದ ಜಯಪ್ರಸಾದ್ ಗೌಡ ಕಡಮ್ಮಾಜೆ (ಫಾರ್ಮ್ಸ್ ಮೊಗ್ರು), ವಿನೀತ್ ಕೋಟ್ಯಾನ್ ಸಾವ್ಯ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಗುರುವಾಯನಕೆರೆ ಹಾಗೂ ಮಂಡಲದ ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು.









