ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬ್ಯಾಂಕ್ ಆಫ್ ಬರೋಡಾದ ಜನರಲ್ ಮೆನೇಜರ್ ರಾಜೇಶ್ ಖನ್ನಾ ಭೇಟಿ

0

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ವಿಭಾಗದ ಜನರಲ್ ಮೆನೇಜರ್ ರಾಜೇಶ್ ಖನ್ನಾ ಭೇಟಿ ನೀಡಿದರು.

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಇತ್ತೀಚೆಗೆ ಅಳವಡಿಸಲಾದ ಅತ್ಯಾಧುನಿಕ ಎಂ.ಆರ್.ಐ ಸ್ಕಾö್ಯನಿಂಗ್ ಮತ್ತು ಅತ್ಯಾಧುನಿಕ ಎಕ್ಷ್-ರೇ ಉಪಕರಣಗಳನ್ನು ವೀಕ್ಷಿಸಿದ ಅವರು, ಸಿಟಿ ಸ್ಕಾö್ಯನ್ ಸೌಲಭ್ಯ, ಅಮ್ಮ ಬರ್ತ್ ಸೆಂಟರ್, ಉಚಿತ ಡಯಾಲಿಸಿಸ್ ಸೇವೆ ಮತ್ತು ಇಲ್ಲಿನ ಅತ್ಯಾಧುನಿಕ ವೈದ್ಯಕೀಯ ಸೇವೆಗೆ ಮೆಚ್ಚುಗೆ ಸೂಚಿಸಿದರು.

ಬಳಿಕ ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಎಲ್ಲಾ ವಿಭಾಗದ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡುತ್ತಾ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಗಳು ಸೇವೆಗೆ ಹೆಸರುವಾಸಿಯಾಗಿದೆ. ಸೇವೆಗೆ ಮೊದಲ ಆಧ್ಯತೆ ನೀಡುವ ಈ ಸಂಸ್ಥೆಗಳಲ್ಲಿ ಉಳಿತಾಯದ ಲೆಕ್ಕಾಚಾರವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಪೂಜ್ಯರು ಪ್ರಾರಂಭಿಸಿದ ಈ ಆಸ್ಪತ್ರೆಯಲ್ಲಿ, ಪೂಜ್ಯರ ಮಾರ್ಗದರ್ಶನ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಅವರ ನೇತೃತ್ವದಲ್ಲಿ ನೀಡಲಾಗುತ್ತಿರುವ ವೈದ್ಯಕೀಯ ಸೇವೆ ಅನನ್ಯವಾದುದು. ಗ್ರಾಮೀಣ ಪ್ರದೇಶದಲ್ಲಿ ಮಿತದರದಲ್ಲಿ ಇಂತಹ ಹೈಟೆಕ್ ಸೇವೆಗಳನ್ನು ನೀಡಲು ಪೂಜ್ಯರಿಂದ ಮಾತ್ರ ಸಾಧ್ಯ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರಂಭದಿAದಲೇ ಅಂದಿನ ವಿಜಯ ಬ್ಯಾಂಕ್ ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ನಿಕಟ ಸಂಬAಧ ಹೊಂದಿತ್ತು ಎಂದರು.

ಬ್ಯಾAಕ್ ಆಫ್ ಬರೋಡಾ ಇದರ ಪುತ್ತೂರು ವಿಭಾಗದ ಡೆಪ್ಯೂಟಿ ಜನರಲ್ ಮೇನೇಜರ್ ಸಾಯಿ ಗಣೇಶ್, ಪುತ್ತೂರು ವಿಭಾಗದ ಪ್ರಾದೇಶಿಕ ವ್ಯವಹಾರ ಅಭಿವೃದ್ಧಿ ಮೆನೇಜರ್ ಭರತ್ ಮತ್ತು ಬ್ಯಾಂಕ್ ಆಫ್ ಬರೋಡಾ ಉಜಿರೆ ಶಾಖೆಯ ಮೇನೇಜರ್ ಶಿವರಾಮ ಜೊತೆಗಿದ್ದರು.

ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್, ಆಸ್ಪತ್ರೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here