ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆಮದುಮಗಳ ಶೃಂಗಾರ ತರಬೇತಿ ಬ್ಯಾಚ್‌ನ ಸಮಾರೋಪ ಸಮಾರಂಭ

0

ಉಜಿರೆ: ಕನಸಿಯಲ್ಲದವರಿಗೆ ದಾರಿ ಇರುವುದಿಲ್ಲ ಎಲ್ಲರೂ ತಮ್ಮ ಭವಿಷ್ಯದ ಬಗ್ಗೆ ಕನಸು ಕಾಣಬೇಕು ಮತ್ತು “ಕಲಿತ ಕೌಶಲ್ಯವನ್ನು ನಿರಂತರವಾಗಿ ಅಭ್ಯಾಸ ಮಾಡುವುದರ ಮೂಲಕ ಇನ್ನಷ್ಟು ನೈಪುಣ್ಯವನ್ನು ಗಳಿಸಬೇಕು.

ಗ್ರಾಹಕರ ತೃಪ್ತಿಗೆ ಆದ್ಯತೆ ನೀಡಿ ಪ್ರಾಮಾಣಿಕತೆ ಹಾಗೂ ಗುಣಮಟ್ಟದೊಂದಿಗೆ ಸೇವೆ ನೀಡಿದಾಗ ಉದ್ಯಮದಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯ” ಎಂದು ದಸ್ಕತು ಸಿನಿಮಾದ ನಾಯಕ ನಟ ದೀಕ್ಷಿತ್ ಶುಭ ಹಾರೈಸಿದರು.

ಅವರು ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ *ಮದುಮಗಳ ಶೃಂಗಾರ (Bridal Makeup) ತರಬೇತಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ, ತರಬೇತಿ ಪಡೆದ ಸಂಸ್ಥೆಯನ್ನು ಯಾವತ್ತಿಗೂ ಮರೆಯಬೇಡಿ, ನಿರಂತರ ಸಂಪರ್ಕದಲ್ಲಿ ಇರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಮಾತನಾಡಿ, “ತರಬೇತಿ ಪೂರ್ಣಗೊಂಡ ನಂತರವೂ ಕಲಿಕೆಯನ್ನು ನಿಲ್ಲಿಸಬಾರದು. ಮಾರುಕಟ್ಟೆಯ ಬದಲಾವಣೆಗಳಿಗೆ ಅನುಗುಣವಾಗಿ ಹೊಸ ತಂತ್ರಜ್ಞಾನ ಮತ್ತು ಹೊಸ ಶೈಲಿಗಳನ್ನು ಕಲಿತುಕೊಳ್ಳಬೇಕು. ಕೌಶಲ್ಯ, ಗುಣಮಟ್ಟ, ಶಿಸ್ತು ಮತ್ತು ಗ್ರಾಹಕರ ವಿಶ್ವಾಸವನ್ನು ಆಧಾರವಾಗಿಟ್ಟುಕೊಂಡು ಉದ್ಯಮವನ್ನು ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.ಸಂಸ್ಥೆಯ ನಿರ್ದೇಶಕ ಸುನಿಲ್ ಜಿ. ನಾಯಕ್ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು.

ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಅವರು ಕಾರ್ಯಕ್ರಮ ನಿರೂಪಿಸಿದರು ಹಿರಿಯ ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ಶ್ವೇತಾ ಪ್ರಾರ್ಥನೆ ಮಾಡಿದರು, ಗೀತಾ ಪ್ರವೀಣ್‌ ಮತ್ತು ಕೀರ್ತನಾ ತಮ್ಮ ತರಬೇತಿ ಅನುಭವ ಹಂಚಿಕೊಂಡು.

LEAVE A REPLY

Please enter your comment!
Please enter your name here