







ಹೊಸಂಗಡಿ “ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಂಗಡಿ, ಬಡಕೋಡಿ ಗ್ರಾಮಗಳ ನೂತನ ಸಮಿತಿಯನ್ನು ತಾಲೂಕು ಅಧ್ಯಕ್ಷೆ ಬಿನುತಾ ಬಂಗೇರ ಅವರ ನೇತೃತ್ವದಲ್ಲಿ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸಭಾ ಭವನದಲ್ಲಿ ಸೆ. 19ರಂದು ರಚಿಸಲಾಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ತೋಮಸ್ ಇವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಚಂದ್ರಕಾಂತ್,ರಾಜೇಶ್ ಪೂಜಾರಿ ಕೊಲಕೆಬೈಲು, ಸಂತೋಷ್ ಮಿರಂದ, ಪ್ರಧಾನ ಕಾರ್ಯದರ್ಶಿಯಾಗಿ ವಿಠಲ ಸಿ. ಪೂಜಾರಿ,ಜೊತೆ ಕಾರ್ಯದರ್ಶಿಗಳಾಗಿ ಭರತ್ ಕರ್ಕೇರ, ನಿತೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ದಿನೇಶ್ ಸಾಲಿಯಾನ್,ವಿಜಯ ಪೂಜಾರಿ, ಪ್ರಮೋದ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಹರೀಶ್ ಪೂಜಾರಿ, ಗೌರವ ಸಲಹೆಗಾರರಾಗಿ ಗೋಪಾಲ ಪೂಜಾರಿ, ಸುಧಾಕರ ಪೂಜಾರಿ, ಮಹಿಳಾ ಗೌರವ ಸಲಹೆಗಾರರಾಗಿ ಸುಜಾತ ಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.


ಸದಸ್ಯರುಗಳಾಗಿ ಅನೀಶ್ ಪಿಲಿಪ್, ಉರುಮಣಿ, ಶಿವಪ್ಪ, ಸುರೇಂದ್ರ, ರಾಜೇಶ್, ಕೃಷ್ಣರಾಜ, ನವೀನ, ಪ್ರಕಾಶ್, ಆನಂದ, ಬೇಡು, ಸುಧಾಕರ, ಕೇಶವ, ಗೋಪಾಲ ಆಚಾರ್ಯ ವಿಠಲ ದೇವಾಡಿಗ,vಇವರನ್ನು ಆಯ್ಕೆ ಮಾಡಲಾಯಿತು.
ಬೆಳ್ತಂಗಡಿ ಬಂಗೇರ ಬ್ರಿಗೇಡ್‌ನ ಉಪಾಧ್ಯಕ್ಷ ಅನೂಪ್ ಎಂ ಬಂಗೇರ, ಪ್ರಧಾನ ಕಾರ್ಯದರ್ಶಿ ಕೆ.ಸಲೀಂ, ವೇಣೂರು ಸಮಿತಿಯ ಬಂಗೇರ ಬ್ರಿಗೇಡಿನ ಅಧ್ಯಕ್ಷ ಬಾಲಕೃಷ್ಣ ಭಟ್ ಸಭೆಯಲ್ಲಿ ಭಾಗವಹಿಸಿದ್ದರು.
ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಜೊತೆ ಕಾರ್ಯದರ್ಶಿ ರಾಕೇಶ್ ಮೂಡುಕೋಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಸದಸ್ಯರಾದ ಜಯಾನಂದ ಬೆಳ್ತಂಗಡಿ ಸ್ವಾಗತಿಸಿ, ವಂದಿಸಿದರು.









