ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್‌ಗೆ ಕಾಶಿಬೆಟ್ಟು ಸಹನಾಶ್ರೀ ಫೌಂಡೇಶನ್‌ ನಿಂದ ಬೆಂಬಲ

0

ಕಾಶಿಬೆಟ್ಟು : ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವ ಸಂಕಲ್ಪದೊಂದಿಗೆ ಸಹನಾಶ್ರೀ ಫೌಂಡೇಶನ್ನಿಂದ ಅಕ್ಟೋಬರ್ 1 ರಿಂದ 8 ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಕಬಡ್ಡಿ ಪ್ರೀಮಿಯರ್ ಲೀಗ್‌ಗೆ ಪ್ರೋತ್ಸಾಹ ಹಾಗೂ ಬೆಂಬಲ ನೀಡುವ ಉದ್ದೇಶದಿಂದ ಸಹನಾಶ್ರೀ ಫೌಂಡೇಶನ್‌ನ ಅಧ್ಯಕ್ಷ ರಾಜೇಶ್ ಪುದುಶೇರಿ ಅವರು ಲೀಗ್ ಆಯೋಜಕರಿಗೆ ಸಂಸ್ಥೆಯ ವತಿಯಿಂದ ರೂ.1 ಲಕ್ಷ ದೇಣಿಗೆ ನೀಡಿ ತಮ್ಮ ಸಹಕಾರವನ್ನು ವ್ಯಕ್ತಪಡಿಸಿದರು.

ಕಬಡ್ಡಿಯಂತಹ ಗ್ರಾಮೀಣ ಮತ್ತು ಸ್ಥಳೀಯ ಮಟ್ಟದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಕ್ರೀಡೆಯನ್ನು ಉತ್ತೇಜಿಸುವುದು ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಹನಾಶ್ರೀ ಫೌಂಡೇಶನ್ ಕೈಗೊಂಡಿರುವ ಈ ಸಹಕಾರ ಮಹತ್ವದ್ದಾಗಿದೆ. ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಸಂಸ್ಥೆಯ ಸಾಮಾಜಿಕ ಬದ್ಧತೆಯ ಮತ್ತೊಂದು ಹೆಜ್ಜೆಯಾಗಿ ಈ ಕಾರ್ಯಕ್ರಮ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ನಮಿತಾ ಕೆ. ಪೂಜಾರಿ, ದ. ಕ ಜಿಲ್ಲೆ ಮಂಗಳೂರು ನಾಮ ನಿರ್ದೇಶಿತ ಸದಸ್ಯರುಜಿಲ್ಲಾ ಮಟ್ಟದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಲಹಾ ಸಮಿತಿ ಅನಂತ ಕೃಷ್ಣ ಯಾದವ್ ಮತ್ತು ದೀಪಕ್ ಸೇರಿದಂತೆ ಗಣ್ಯರು, ಕ್ರೀಡಾ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು

ಕ್ರೀಡಾಪಟುಗಳ ಪ್ರತಿಭೆಗೆ ಉತ್ತೇಜನ ನೀಡುವುದು, ಯುವಜನತೆಯನ್ನು ಕ್ರೀಡೆಯತ್ತ ಪ್ರೇರೇಪಿಸುವುದು ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ನಿರಂತರವಾಗಿ ಕೈಜೋಡಿಸುವುದು ಸಹನಶ್ರೀ ಫೌಂಡೇಶನ್‌ನ ಪ್ರಮುಖ ಗುರಿಯಾಗಿದೆ.–

ರಾಜೇಶ್ ಪುದುಶೇರಿ ಅಧ್ಯಕ್ಷರು ಸಹನಶ್ರೀ ಫೌಂಡೇಶನ್

LEAVE A REPLY

Please enter your comment!
Please enter your name here