ಕಾಡುಹಂದಿ ಬೇಟೆಯಾಡಿ ಮಾಂಸ ದಾಸ್ತಾನು ಮಾಡಿದ್ದ ವ್ಯಕ್ತಿ ಸೆರೆ; ಕೋವಿ, ಕತ್ತಿ ವಶಕ್ಕೆ

0

​ಬೆಳ್ತಂಗಡಿ: ತಾಲೂಕಿನ ನೆರಿಯ ಗ್ರಾಮದ ಮುಚ್ಚರಾಳಿ ಎಂಬಲ್ಲಿ ಕಾಡುಹಂದಿಯನ್ನು ಕಾನೂನುಬಾಹಿರವಾಗಿ ಬೇಟೆಯಾಡಿ, ಅದರ ಮಾಂಸವನ್ನು ದಾಸ್ತಾನು ಮಾಡಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಸ್ತಗಿರಿ ಮಾಡಿರುವ ಘಟನೆ ವರದಿಯಾಗಿದೆ.

​ನೆರಿಯ ಗ್ರಾಮದ ಮುಚ್ಚಳ್ಳಿ ಮನೆ ನಿವಾಸಿ ಸುರೇಶ್ ಎಂ.ಕೆ. (38) ದಸ್ತಗಿರಿಗೆ ಒಳಗಾದ ಆರೋಪಿ. ಸೆ. 20, ರಂದು ಈ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಆರೋಪಿಯಿಂದ ಬೇಟೆಗೆ ಬಳಸಲಾಗಿದ್ದ ಕೋವಿ, ಕತ್ತಿ ಹಾಗೂ ಇತರೆ ಸೊತ್ತುಗಳನ್ನು ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ​ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮಹೇಶ್ ಎಂ. ದೇವಡಿಗ ಅವರ ಮಾರ್ಗದರ್ಶನದಂತೆ ನೆರಿಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರವಿಚಂದ್ರ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

​ಕಾರ್ಯಾಚರಣೆ ಹಾಗೂ ತಕ್ಷೀರು ಪತ್ತೆ ಹಚ್ಚುವ ಕಾರ್ಯದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕಮಲ, ದೀಪಾ ವಿ. ಗಡಗಿ, ರಂಜಿತ್ ಕುಮಾರ್ ಎಸ್., ಪಿ.ಜಿ. ನಾಗೇಶ್ ಗೌಡ ಹಾಗೂ ಗಸ್ತು ಅರಣ್ಯ ಪಾಲಕ ವೀರೆಶ್ ಅವರು ಸಕ್ರಿಯವಾಗಿ ಸಹಕರಿಸಿದ್ದಾರೆ.

LEAVE A REPLY

Please enter your comment!
Please enter your name here