ವಕೀಲ ವೃತ್ತಿಯಲ್ಲಿದ್ದ ಉಜಿರೆ ನಿವಾಸಿ ಸರಸ್ವತಿ ಜೈನ್ ನಿಧನ

0

ಉಜಿರೆ: ಬೆಳ್ತಂಗಡಿಯಲ್ಲಿ ವಕೀಲ ವೃತ್ತಿಯಲ್ಲಿದ್ದ ಉಜಿರೆ ಗ್ರಾಮದ ನಿವಾಸಿ ಸರಸ್ವತಿ ಜೈನ್ (69) ಅಲ್ಪಕಾಲದ ಅನಾರೋಗ್ಯದಿಂದ ಸೆ. 19 ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಅವರು ಉಜಿರೆಯ ಎಸ್. ಡಿ. ಎಂ. ಕಾಲೇಜಿನಲ್ಲಿ ಅರೆಕಾಲಿಕ ಕಾನೂನು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು.

ಧರ್ಮಾನುರಾಗಿಯಾಗಿದ್ದ ಅವರು 42 ಬಾರಿ ಶಿಖರ್ಜಿ ಯಾತ್ರೆ ಮತ್ತು 14 ವರ್ಷಗಳ ಅನಂತ ನೋಂಪಿ ಆಚರಿಸಿ, ಉದ್ಯಾಪನೆ (ಸಮಾರೋಪ) ಮಾಡಿದ್ದರು.

ಅವರಿಗೆ ಮಗ ಇದ್ದಾರೆ. ಭಾನುವಾರ ಸರಸ್ವತಿ ಅವರ ಅಂತ್ಯ ಸಂಸ್ಕಾರವನ್ನು ಬೆಳ್ತಂಗಡಿ ಜೈನ್ ಪೇಟೆ ಬಸದಿ ಬಳಿ ಇರುವ ಚಿತಗಾರದಲ್ಲಿ ನಡೆಸಲಾಯಿತು.

LEAVE A REPLY

Please enter your comment!
Please enter your name here