






ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರ ಸಂಘದ ಒಂದು ದಿನದ ಕಾರ್ಯಗಾರವು ದಕ್ಷಿಣ ಕನ್ನಡ ಜಿಲ್ಲಾ ಪ್ರಾಂಶುಪಾಲರ ಸಂಘದ ಸಹಯೋಗದೊಂದಿಗೆ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಪ್ರೇರಣ ಸಭಾಂಗಣದಲ್ಲಿ ನಡೆಯಿತು .
ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಬೆಂಗಳೂರು ಇಲ್ಲಿಯ ಸಹಾಯಕ ನಿರ್ದೇಶಕರಾದ ಶ್ರೀ ಆನಂದ ಪಿ ಇವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಡಾ.ನವೀನ್ ಶೆಟ್ಟಿಯವರು ಕಾರ್ಯಗಾರದ ಮಹತ್ವವನ್ನು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ದ.ಕ ಜಿಲ್ಲಾ ಉಪ ನಿರ್ದೇಶಕ ರಾಜೇಶ್ವರಿ ,ಕರ್ನಾಟಕ ರಾಜ್ಯ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಜಯಾನಂದ ಸುವರ್ಣ, ಕರ್ನಾಟಕ ರಾಜ್ಯ ಉಪನ್ಯಾಸಕರ ಸಂಘದ ಜೊತೆ ಕಾರ್ಯದರ್ಶಿ ವಿಠ್ಠಲ್ , ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಹರಿಪ್ರಕಾಶ್ ಭೈಲಾಡಿ ಇವರುಗಳು ಕಾರ್ಯಗಾರಕ್ಕೆ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿವೇಕಾನಂದ ಕಾಲೇಜಿನ ಪ್ರೊಫೆಸರ್ ಡಾ. ಅರುಣ್ ಪ್ರಕಾಶ್ “ಭಾರತದಲ್ಲಿ ಸುಸ್ಥಿರ ಅಭಿವೃದ್ಧಿ” ಕುರಿತು ಮಾಹಿತಿ ನೀಡಿದರು.ದಕ್ಷಿಣ ಕನ್ನಡ ಜಿಲ್ಲಾ ಅರ್ಥಶಾಸ್ತ್ರ ಉಪಾನ್ಯಾಸಕರ ಸಂಘದ ಅಧ್ಯಕ್ಷ ದಯಾನಂದ ಇವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ವಸುಧ ಪ್ರಾರ್ಥಿಸಿದರು. ರಮಾನಂದ ವಂದನಾರ್ಪಣೆ ಮಾಡಿದರು. ಚಂದ್ರಿಕಾ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.









