






ಮಡoತ್ಯಾರು: ಮಾತ್ರ ವಂದನಾ ಮಾತ್ರ ಭೋಜನ ಕಾರ್ಯಕ್ರಮ ಎಸ್ ಪಿ ವೈ ಎಸ್ ಎಸ್ ಸಮಿತಿ ಮಹಿಷ ಮರ್ದಿನಿ ಶಾಖೆ ಮಡoತ್ಯಾರು ಇಲ್ಲಿ ಕಳೆದ 56 ದಿನಗಳಿಂದ ನಡೆಯುತ್ತಿರುವ ಯೋಗ ತರಗತಿಯಲ್ಲಿ ಸೆ 20 ರoದು ಮಾತ್ರ ವಂದನಾ ಮಾತೃ ಭೋಜನ ವಿಶೇಷ ಕಾರ್ಯಕ್ರಮವು ಜರಗಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮ್ಯರವರು ವಹಿಸಿದ್ದರು ಯೋಗ ತರಬೇತಿಯ ಬಗ್ಗೆ ವಿಶೇಷ ಬಾಷಣಗಾರರಾದ ಲೋಕೇಶ್ ರವರು ಮಾತನಾಡಿ ನಮ್ಮ ಜೀವನದಲ್ಲಿ ಅಮ್ಮನ ಪಾತ್ರದ ಬಗ್ಗೆ ನೆನಪಿಸಿ ಹೆತ್ತವರನ್ನು ಹಿರಿಯರನ್ನು ನಾವು ಯಾವಾಗಲೂ ಗೌರವದಿಂದ ನಡೆಸುಕೊಳ್ಳಬೇಕೆಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಗಾಯತ್ರಿ ರಾವ್ ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಯೋಗ ಶಿಕ್ಷಕರು ಯೋಗ ತರಬೇತಿ ಪಡೆದವರು ಸಾರ್ವಜನಿಕರು ಉಪಸ್ಥಿತರಿದ್ದರು ಕಾರ್ಯಕ್ರಮವು ಕೊನೆಯಲ್ಲಿ ಯೋಗಾಪಟುಗಳು ತಯಾರಿಸಿದ ಆಹಾರವನ್ನು ಕೈತುತ್ತಿನ ಮೂಲಕ ವಿತರಿಸುವ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
ಕಾರ್ಯಕ್ರಮವು ಬಹು ಸುಂದರ ಹಾಗೂ ಸರಳವಾಗಿ ನಡೆದು ಪ್ರಕೃತಿಯಿಂದ ದೊರೆಯುವ ವಸ್ತುಗಳಿಂದ ವೇದಿಕೆಯನ್ನು ಅಲಂಕರಿಸಲಾಗಿತ್ತು ಹಿoದೂ ಸಂಸ್ಕೃತಿಯ ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡುವಂತಹ ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು.
ಕಾರ್ಯಕ್ರಮವನ್ನು ಸುರೇಖ ನಿರೂಪಿಸಿ ನೇತ್ರಾವತಿ ಸ್ವಾಗತ ಮಾಡಿದರು ಸೂರ್ಯಕಲಾ ರವರು ವರದಿ ಓದಿದರು ವೇದಿಕಾ ರವರು ವಂದನಾರ್ಪಣೆ ಮಾಡಿದರು









