







ಪೆರಾಡಿ : 2025-26ನೇ ಸಾಲಿನ ಮಹಾಸಭೆಯು ಸಂಘದ ವಠಾರದಲ್ಲಿ ಸೆ.20ರಂದು ನಡೆಯಿತು. ಸಂಘದ ಅಧ್ಯಕ್ಷ ಸಹಕಾರ ರತ್ನ ಸತೀಶ್ ಕೆ.ಕಾಶಿಪಟ್ಣ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘ ಒಟ್ಟು 3289 ಸದಸ್ಯರು ಹೊಂದಿದ್ದು ರೂ. 2,15,70,210ಕೋಟಿ ಪಾಲುಬಂಡವಾಳ ಹೊಂದಿದೆ. ಈ ಸಾಲಿನಲ್ಲಿ ಒಟ್ಟು ರೂ. 57 ಕೋಟಿ ಠೇವಣಿ ಹೊಂದಿರುತ್ತದೆ. ರೂ.426.46 ಕೋಟಿ ವಾರ್ಷಿಕ ವ್ಯವಹಾರ ನಡೆಸಿ ರೂ.1,06,56,019ಕೋಟಿ ನಿವ್ವಳ ಲಾಭಗಳಿಸಿದೆ.
ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲಾಗುವುದು ಎಂದರು. ಸಂಘದ ಕಟ್ಟಡಕ್ಕೆ ಡಿವಿಡೆಂಡ್ ನಲ್ಲಿ 5% ವಾಪಾಸ್ ನೀಡಲು ಸದಸ್ಯರು ಒಪ್ಪಿಗೆ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಾರವರು ಸಭೆಯಲ್ಲಿ 2026-27ನೇ ಸಾಲಿನ ಅಂದಾಜು ಬಜೆಟ್ ರೂ. 9,10,56,000ಕೋಟಿ ಮಂಡಿಸಿದರು.
ಉಪಾಧ್ಯಕ್ಷ ಶ್ರೀಪತಿ ಉಪಾಧ್ಯಾಯ ನಿರ್ದೇಶಕರಾದ ಎನ್. ಸೀತಾರಾಮ್ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೋ, ದೇವಕಿ ಡಿ.ಶೆಟ್ಟಿ, ಸುಜಾತಾ, ಕೃಷ್ಣಪ್ಪ, ರಾಜೇಶ್ ಎನ್ ಶೆಟ್ಟಿ, ಸುರೇಶ್ ಅಂಚನ್, ಅಕ್ಷಯ ಕುಮಾರ್, ವಿಜಯ ನಾಯ್ಕ, ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಕೋಟ್ಯಾನ್ ಉಪಸ್ಥಿತರಿದ್ದರು.


ಸಿಬ್ಬಂದಿಗಳಾದ ರೋಹಿಣಿ, ವೀರೇಂದ್ರ ಕುಮಾರ್, ಕವಿತಾ, ಅಕ್ಷತಾ, ನಾಗೇಶ್ ಪೂಜಾರಿ, ರಮ್ಯಾ, ನಂದೀಶ್, ಅಖಿಲೇಶ್ ಕುಮಾರ್, ಗಿರೀಶ್, ಸತೀಶ್, ಮನೋಜ್ ಕುಮಾರ್, ಹರ್ಷಲಾ ವಿ. ಜೈನ್, ಸುಜಿತ್ ಕುಮಾರ್ ಸಹಕರಿಸಿದರು.
ಸನ್ಮಾನ ಹಾಗೂ ಆರ್ಥಿಕ ನೆರವು ಹಸ್ತಾಂತರ ಸಂಘದ ವತಿಯಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಸಂಘದ ಅಧ್ಯಕ್ಷ ಸಹಕಾರ ರತ್ನ ಸತೀಶ್ ಕೆ. ಕಾಶಿಪಟ್ಣ ಇವರನ್ನು ಸನ್ಮಾನಿಸಲಾಯಿತು.2025-26ನೇ ಸಾಲಿನಲ್ಲಿ 5,7,10 ಹೆಚ್ಚು ಅಂಕ ಗಳಸಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.ಪಿ ಯು ಸಿ ಯಲ್ಲಿ ಶೇ 90%ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಶೇ 95%ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಹಿತು. ಉನ್ನತ ವ್ಯಾಸಂಗದಲ್ಲಿ ಸಾಧನೆಗೈದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ, ಸಂಘದ ಕಾರ್ಯವ್ಯಪ್ತಿಯ 5ಗ್ರಾಮಗಳ ತಲಾ ಓರ್ವ ಕೃಷಿಕ ಸಾಧಕ, ಅರ್ಹ ವಿಶೇಷಚೇತನ ನಾಗರಿಕರಿಗೆ ಸಹಾಯಧನ ವಿತರಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಾ ವರದಿ ಮಂಡಿಸಿದರು. ಉಪಾಧ್ಯಕ್ಷ ಶ್ರೀಪತಿ ಉಪಾಧ್ಯಾಯ ಸ್ವಾಗತಿಸಿದರು.









