






ಬೆಳ್ತಂಗಡಿ : ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಿರಿಯಡ್ಕ ಇವರ ವತಿಯಿಂದ ನಡೆದ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಹಿರಿಯಡ್ಕದಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾಟದಲ್ಲಿ ಮಚ್ಚಿನ ಗ್ರಾಮದ ಗಗನ್ ಸಿ. ಶೆಟ್ಟಿ ಅವರು ‘ಶ್ರೀ ವೀರಭದ್ರ ಕೇಸರಿ’ ಪ್ರಶಸ್ತಿ ಹಾಗೂ ಗದೆಯನ್ನು ಮುಡಿಗೇರಿಸಿಕೊಂಡಿದ್ದಾರೆ.


ಮಚ್ಚಿನ ಗ್ರಾಮದ ಪೆರಂಗೋಡಿ ನಿವಾಸಿಗಳಾದ ಚಂದ್ರಶೇಖರ್ ಬಿ. ಶೆಟ್ಟಿ ಮತ್ತು ಗೀತಾ ಸಿ. ಶೆಟ್ಟಿ ದಂಪತಿಯ ಪುತ್ರರಾಗಿರುವ ಗಗನ್ ಸಿ. ಶೆಟ್ಟಿ, ಪುರುಷೋತ್ತಮ ಗುಜರನ್ ಅವರ ಶಿಷ್ಯರಾಗಿದ್ದಾರೆ.
ಕುಸ್ತಿ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರತಿಭೆ ಮೆರೆದು ವಿಜೇತರಾಗುವ ಮೂಲಕ ಸ್ಥಳೀಯರಿಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿರುವ ಗಗನ್ ಅವರ ಈ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಊರಿನ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.









