ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ನಾವರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಮನವಿ ಸಲ್ಲಿಕೆ​

0

ಬೆಳ್ತಂಗಡಿ : ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದ (ESA) 7ನೇ ಕರಡು ಅಧಿಸೂಚನೆಯಡಿ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸದಂತೆ ಆಗ್ರಹಿಸಿ, ಸೆ.19 ಶನಿವಾರದಂದು ನಾವರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅಕ್ಷೇಪಣೆಯ ಮನವಿ ಪತ್ರವನ್ನು ಸಲ್ಲಿಸಲಾಯಿತು.​

ಈ ಮನವಿ ಪತ್ರವನ್ನು ಸುಳ್ಕೇರಿ ಗ್ರಾಮ ಪಂಚಾಯಿತಿನ ಆಡಳಿತ ಅಧಿಕಾರಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಂತರಿಸಲಾಯಿತು.​

ಈ ಸಂದರ್ಭದಲ್ಲಿ ಪ್ರಮುಖರಾದ ಎನ್. ವೀರೇಂದ್ರ ಕುಮಾರ್, ಎನ್. ವಿಜಯ ಕುಮಾರ್ ಜೈನ್, ನಿತ್ಯಾನಂದ ಎನ್., ಪುಷ್ಪರಾಜ್, ರಾಜು ಪೂಜಾರಿ, ಸುಂದರ ಪೂಜಾರಿ ಕೇಡಲು, ಸಂತೋಷ್ ಕೇಡಲು, ಸುರೇಶ್ ಜಾಲಾ, ರವಿ ಪೂಜಾರಿ ಸೇರಿದಂತೆ ಹಲವು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here