






ಇಂದಬೆಟ್ಟು: ವಿಶ್ವ ನಾಯಕ, ಭಾರತದ ಜನಪ್ರಿಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 76ನೇ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ವತಿಯಿಂದ ಗ್ರಾಮದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಅವರ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ರಾಷ್ಟ್ರಸೇವೆಗೆ ಮತ್ತಷ್ಟು ಶಕ್ತಿ ಸಿಗಲೆಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.


ಈ ಪುಣ್ಯ ಕಾರ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭ ಹಾರೈಸಿದರು.
ವಿಶೇಷ ಪೂಜೆ ಸಲ್ಲಿಸಿದ ಪ್ರಮುಖ ಕ್ಷೇತ್ರಗಳು:ಮಹಮ್ಮಾಯಿ ಮಾರಿಗುಡಿ, ಬೆದ್ರಬೆಟ್ಟು ಕ್ಷೇತ್ರಬಂಗಾಡಿ ಮಹಾ ಗಣಪತಿ ದೇವಸ್ಥಾನ ಹಾಗೂ ಸಹಸ್ರ ನಾಗಬನ ಕ್ಷೇತ್ರದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನಬಂಗಾಡಿ ಶಾಂತಿನಾಥ ಸ್ವಾಮಿ ಬಸದಿ ಕ್ಷೇತ್ರಶ್ರವಣ ಗುಂಡ ಕ್ಷೇತ್ರಮಹಮ್ಮಾಯಿ ಮಾರಿಗುಡಿ, ಕಲ್ಲಾಜೆ ಶಾಂತಿನಗರ ಕ್ಷೇತ್ರಉಳ್ಳಾಕುಳ ಮೂಲಸ್ಥಾನ ಶ್ರೀ ಕ್ಷೇತ್ರ, ಕರುವಳ್ಳ ಕಲ್ಲಗುಂಡ ಕ್ಷೇತ್ರಈ ಎಲ್ಲಾ ಕ್ಷೇತ್ರಗಳಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರ್ಥನೆಗಳನ್ನು ನೆರವೇರಿಸಲಾಯಿತು.









