







ಬೆಳ್ತಂಗಡಿ: ನಿವೃತ್ತ ಸರಕಾರಿ ವೈದ್ಯರು, ಪ್ರಸ್ತುತ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ವೈದ್ಯಧಿಕಾರಿಯಾಗಿರುವ ಎಂ.ಎಸ್. ಭಟ್ ಅವರು ಸೋಜಾ ಎಲೆಕ್ಟ್ರಾನಿಕ್ಸ್ ಮಳಿಗೆಗೆ ಸೆ.13ರಂದು ಭೇಟಿ ನೀಡಿ ಸಂಸ್ಥೆಯ ಸೇವಾ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಅವರು ಮಾತನಾಡಿ, ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಇದರ ಚಟುವಟಿಕೆಯನ್ನು ಮೆಚ್ಚಿ ಸಮಾಜ ಸೇವಾ ಕಾರ್ಯಗಳನ್ನು ಕಂಡು ಹರ್ಷಗೊಂದಿದ್ದೇನೆ. ನಾನು ಸುಮಾರು 40 ವರ್ಷಗಳಿಂದ ಸೋಜಾ ಸಂಸ್ಥೆಯನ್ನು ನಂಬಿದ್ದೇನೆ. ಹಾಗೂ ಇದರ ಗ್ರಾಹಕನಾಗಿದ್ದೇನೆ.
ಯಾವುದೇ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ ನನ್ನ ಮೊದಲ ಆಯ್ಕೆ ಸೋಜಾ ಆಗಿದೆ ಎಂದರು.ಸಂಸ್ಥೆಯ ಹಿರಿಯ ಗ್ರಾಹಕರು ಆಗಿರುವ ನಾನು ವಾಷಿಂಗ್ ಮಷಿನನ್ನು ಇಲ್ಲಿಂದಲೇ ಖರೀದಿಸುತ್ತೇನೆ ಎಂದು ಶುಭಕೋರಿದರು.









