






ಬೆಳ್ತಂಗಡಿ: ತಾಲೂಕಿನ ಸಂತೆಕಟ್ಟೆಯ ಸುವರ್ಣ ಆರ್ಕೇಡ್‌ನಲ್ಲಿ ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಡಾ. ಕೆ. ಜಯಕೀರ್ತಿ ಜೈನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ (ಸೆಪ್ಟೆಂಬರ್ 12, 2026) ಜರುಗಿತು.
ಮಹಾಸಭೆಯ ಪೂರ್ವಭಾವಿಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಉಜಿರೆ ಇದರ ಸಹಯೋಗದೊಂದಿಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಎಸ್‌ಡಿಎಂ ಆಸ್ಪತ್ರೆಯ ಎಮ್.ಡಿ ಎಂ. ಜನಾರ್ಧನ್ ಅವರು ಶಿಬಿರವನ್ನು ಉದ್ಘಾಟಿಸಿ, ಸಂಘದ ಈ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ಈ ಜನಪರ ಶಿಬಿರದಲ್ಲಿ ಒಟ್ಟು 200ಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು. ಎಸ್‌ಡಿಎಂ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ದಿತೇಶ್ ಹಾಗೂ ವೈದ್ಯಾಧಿಕಾರಿ ಡಾ. ಆದರ್ಶ್ ಅವರು ತಪಾಸಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.ನಂತರ ನಡೆದ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಾ. ಕೆ. ಜಯಕೀರ್ತಿ ಜೈನ್ ಅವರು, ಆಡಳಿತ ಮಂಡಳಿಯ ಸದಸ್ಯರು, ಸರ್ವ ಸದಸ್ಯರು ಹಾಗೂ ಸಾರ್ವಜನಿಕರ ಹಿತಾಸಕ್ತಿ ಮತ್ತು ಸಹಕಾರದಿಂದ ಕಳೆದ 17 ವರ್ಷಗಳಿಂದ ಸಂಘವು ಯಶಸ್ವಿಯಾಗಿ ನಡೆದು ಬಂದ ಹಾದಿಯನ್ನು ವಿವರವಾಗಿ ಸಭೆಗೆ ತಿಳಿಸಿದರು. ಪ್ರತೀ ವರ್ಷದಂತೆ ಪ್ರಸಕ್ತ ಸಾಲಿನಲ್ಲೂ ಸಂಘವು ಲಾಭಾಂಶದಲ್ಲಿದ್ದು, ಸದಸ್ಯರಿಗೆ ಶೇ. 20ರಷ್ಟು ಡಿವಿಡೆಂಡ್ (ಲಾಭಾಂಶ) ಘೋಷಿಸಿರುವುದಾಗಿ ಹರ್ಷ ವ್ಯಕ್ತಪಡಿಸಿದರು.


ಪ್ರತಿಭಾ ಪುರಸ್ಕಾರ:ಸಂಘದ ಸದಸ್ಯರು ಹಾಗೂ ಸಿಬ್ಬಂದಿಗಳ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧಿಸಿದ ಮೈಲಿಗಲ್ಲನ್ನು ಗುರುತಿಸಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕುಮಾರಿ ನಿಜ ಕುಲಾಲ್, ಶ್ರೇಯಾ ಗೌಡ, ಸಾನ್ನಿ ಜೈನ್ ಹಾಗೂ ಆಶ್ವೇಷ್ ಡಿ. ಜೈನ್.ಪ್ರವಲ್ ರಾಜ್ ಜೈನ್.ಸಂಘದ ಉಪಾಧ್ಯಕ್ಷ ಚಿದಾನಂದ ಹೂಗಾರ್ ಅವರು ಸ್ವಾಗತ ಕೋರಿದರು. ಸಲಹೆಗಾರ ವಸಂತ ಸುವರ್ಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಸನ್ಮಾನ ಕಾರ್ಯಕ್ರಮವನ್ನು ಹರಿಪ್ರಸಾದ್ ನಿರ್ವಹಿಸಿದರೆ, ವಂದನಾರ್ಪಣೆಯನ್ನು ಪ್ರಶಾಂತ್ ನೆರವೇರಿಸಿದರು.ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಚಂದ್ರಶೇಖರ್, ಅಬ್ದುಲ್ ರಝಾಕ್, ಆರತಿ ಜೈನ್, ಪ್ರಶಾಂತ್ ಕುಮಾರ್, ಹೇಮಲತಾ, ವಾರಿಜಾ ಕೆ., ಹರಿಪ್ರಸಾದ್, ರತ್ನಾವತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿರಾಜ್, ಕೊಕ್ಕಡ ಶಾಖಾಧಿಕಾರಿ ಪಿ. ಅತಿಶಯ್ ಜೈನ್, ಸಿಬ್ಬಂದಿಗಳಾದ ವಿಶಾಲ, ಧಾಮಿನಿ ಜೈನ್, ಪಿಗ್ಮಿ ಸಂಗ್ರಾಹಕರು, ನಿವೃತ್ತ ಎಇಇ ಸುಭಾಶ್ಚಂದ್ರ ಹಾಗೂ ಅಪಾರ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.









