






ಲಾಯಿಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ, ಬಲಮುರಿ ಕ್ಷೇತ್ರದ ವತಿಯಿಂದ 38ನೇ ವರ್ಷದ ಶ್ರೀ ಗಣೇಶೋತ್ಸವವು ಸೆ.14ರಿಂದ 16ರವರೆಗೆ ಮೂರು ದಿನಗಳ ಕಾಲ ಲಾಯಿಲ ಶ್ರೀ ವಿಶ್ವೇಶ್ವರ ಕಲಾ ಮಂದಿರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.14ರಂದು ಬೆಳಗ್ಗೆ 8ಕ್ಕೆ ಪುಣ್ಯಾಹ ಕಲಶ, 9ಕ್ಕೆ ತೋರಣ ಮುಹೂರ್ತ, 9.33ಕ್ಕೆ ಮೂರ್ತಿ ಪ್ರತಿಷ್ಠೆ ಹಾಗೂ 10ಕ್ಕೆ ಉತ್ಸವ ಉದ್ಘಾಟನೆ ನಡೆಯಲಿದೆ. ಬೆಳಗ್ಗೆ 10.30ರಿಂದ ಶ್ರೀ ಬಲಮುರಿ ಗಣಪತಿ ಭಜನಾ ಮಂಡಳಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚೆಂದುರೋಡು ಲಾಯಿಲ, ಶ್ರೀ ದುರ್ಗಾ ಭಜನಾ ಮಂಡಳಿ ಕನ್ನಾಜೆ ಲಾಯಿಲ ಇವರಿಂದ ಭಜನಾ ಕಾರ್ಯಕ್ರಮಗಳು ಮಧ್ಯಾಹ್ನ 11-30ಕ್ಕೆ ಗಣಹೋಮ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, 11.30ಕ್ಕೆ ಗಣಹೋಮ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 5ರಿಂದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಭಕ್ತಿಗೀತೆ ಮತ್ತು ದೇಶಭಕ್ತಿಗೀತೆ ಸ್ಪರ್ಧೆ ನಡೆಯಲಿದೆ.


ಸಂಜೆ 6ರಿಂದ ಶ್ರೀ ಬಲಮುರಿ ಮಹಿಳಾ ಭಜನಾ ತಂಡ ಲಾಯಿಲ, ಶ್ರೀ ಸರಸ್ವತಿ ಭಜನಾ ಮಂಡಳಿ ವಿವೇಕಾನಂದ ನಗರ ಇವರಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8ರಿಂದ ಕನೋಡಿ, ಪಡ್ಡಾಡಿ ಶಾಲಾ ಮಕ್ಕಳ ನೃತ್ಯ ಮತ್ತು ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ ಜರುಗಲಿದೆ. ದೇಶಭಕ್ತಿ, ಜಾನಪದ ಹಾಗೂ ಭಕ್ತಿ ಪ್ರಧಾನ ನೃತ್ಯಗಳಿಗೆ ಮಾತ್ರ ಅವಕಾಶವಿದ್ದು, ರಾತ್ರಿ 8.30ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.ಸೆ.15ರಂದು ಬೆಳಗ್ಗೆ 9ಕ್ಕೆ ಪುಣ್ಯಾಹ ಕಲಶ ಹಾಗೂ ಗಣಹೋಮ, 11ಕ್ಕೆ ಶ್ರೀ ಶಾರದಾ ಭಜನಾ ಮಂಡಳಿ ಪುದೊಟ್ಟು ಇವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ರಿಂದ ಕಡಬದ ಭಜನಾ ತಂಡದಿಂದ’ಭಜನಾಮೃತ’ ಕಾರ್ಯಕ್ರಮ ನಡೆಯಲಿದ್ದು, ಸಂಜೆ 7ಕ್ಕೆ ಓಂಶಕ್ತಿ ಗೆಳೆಯರ ಬಳಗ ಲಾಯಿಲ ವತಿಯಿಂದ ಹರೀಶ್ ಪಡುಬಿದ್ರೆ ವಿರಚಿತ ತುಳು ಹಾಸ್ಯಮಯ ಸಾಮಾಜಿಕ ನಾಟಕ ‘ಅಜ್ಜಿಗ್ ಎರ್ಲಾ ಇಜ್ಜಿ’ ಪ್ರದರ್ಶನಗೊಳ್ಳಲಿದೆ.
ರಾತ್ರಿ 9ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.ಸೆ.16ರಂದು ಬೆಳಗ್ಗೆ 9ರಿಂದ ಪುಣ್ಯಾಹ ಕಲಶ ಹಾಗೂ ಗಣಹೋಮ, 10.30ರಿಂದ ಶ್ರೀ ಕೃಷ್ಣ ಮುಖ್ಯಪ್ರಾಣ ಭಜನಾ ಮಂಡಳಿ ಬೆಳ್ತಂಗಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಧಾರ್ಮಿಕ ರ್ಮಿಕ ಸಭೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಅರಮಲೆಬೆಟ್ಟು ಗುರುವಾಯನಕೆರೆ ಆಡಳಿತ ಮೊಕೇಸರ ಸುಕೇಶ್ ಕುಮಾರ್ ಕಡಂಬು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಭಾರತೀಯ ಮದ್ದೂರ್ ಸಂಘ ದ.ಕ. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು, ಅಭ್ಯಾಸ್ ಶಿಕ್ಷಣ ಸಂಸ್ಥೆ ಪ್ರಗತಿನಗರ ಲಾಯಿಲ ಅಧ್ಯಕ್ಷ ಕಾರ್ತಿಕೇಯ, ನಿಡ್ಲೆ ಅಗ್ರಿಲೀಫ್ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ರಾವ್ ಟಿ., ಕಳೆಂಜ ನಂದಗೋಕುಲ ಗೋಶಾಲೆ ಸ್ಥಾಪಕಾಧ್ಯಕ್ಷ ಡಾ. ಎಂ.ಎಂ. ದಯಾಕರ್, ಸಿ.ಎ ಬ್ಯಾಂಕ್ ಗುರುವಾಯನಕೆರೆ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಹಾಗೂ ಬೆಳ್ತಂಗಡಿ ಪಂ.ರಾ.ಇಂ. ಇಲಾಖೆ ವಿಭಾಗದ ಇಂಜಿನಿಯರ್ ದಶರಥ ವಿ. ಕುಂಬಾರ ಉಪಸ್ಥಿತರಿರಲಿದ್ದಾರೆ.ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ 1.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ಮಹಾಪೂಜೆ ನೆರವೇರಿದ ಬಳಿಕ ಬಲಮುರಿ ವಿಶ್ವೇಶ್ವರನ ವೈಭವಪೂರ್ಣ ಶೋಭಾಯಾತ್ರೆ ನಡೆಯಲಿದೆ. ವಿವಿಧ ಭಜನಾ ತಂಡಗಳು ಹಾಗೂ ಆಕರ್ಷಕ ವೇಷಭೂಷಣಗಳೊಂದಿಗೆ ಶೋಭಾಯಾತ್ರೆಯು ಶ್ರೀ ವಿಶ್ವೇಶ್ವರ ಕಲಾ ಮಂದಿರದಿಂದ ಹೊರಟು ಬೆಳ್ತಂಗಡಿಯ ರಾಜಬೀದಿಯಲ್ಲಿ ಸಾಗಲಿದೆ. ಬಳಿಕ ಶ್ರೀ ರಾಘವೇಂದ್ರ ಮಠದ ಬಳಿಯಿರುವ ಗಣಪತಿ ಕಟ್ಟೆಯಲ್ಲಿ ವಸಂತ ಪೂಜೆ ನೆರವೇರಿಸಿ, ಪವಿತ್ರ ಸೋಮಾವತಿ ನದಿಯಲ್ಲಿ ಗಣೇಶ ವಿಗ್ರಹದ ವಿಸರ್ಜನೆ ನಡೆಯಲಿದೆ ಎಂದು ಸಮಿತಿ









