







ಬೆಳ್ತಂಗಡಿ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಶೇಷಪ್ಪ ಸಾಲಿಯಾನ್ ಅಧ್ಯಕ್ಷತೆಯಲ್ಲಿ ಸೆ.9 ರಂದು ಸಂಘದ ವಠಾರದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಂಘವು ಪ್ರಸಕ್ತ ಸಾಲಿನಲ್ಲಿ 319.20 ಕೋಟಿ ವ್ಯವಹಾರ ನಡೆಸಿ, ರೂ. 27 ಕೋಟಿ ಠೇವಣಿ ಇರಿಸಿ, ರೂ.1.10 ಕೋಟಿ ಲಾಭಗಳಿಸಿ ಸಂಘದ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ಶೇಷಪ್ಪ ಸಾಲಿಯಾನ್ ಘೋಷಣೆ ಮಾಡಿದರು. ನಮ್ಮ ಸಂಘವು ಜಾತಿಮತ ಪಕ್ಷಭೇದವಿಲ್ಲದೆ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಆಡಳಿತ ಮಂಡಳಿಯನ್ನು ಒಳಗೊಂಡಿದೆ.
ಸಿಬ್ಬಂದಿಗಳ ಪ್ರಾಮಾಣಿಕ ಸೇವೆ, ಜಿಲ್ಲಾ ಬ್ಯಾಂಕ್ ಪ್ರತಿನಿಧಿಗಳ ಮಾರ್ಗದರ್ಶನ, ಪಿಗ್ಮಿ ಸಂಗ್ರಹಾಕರ ಸೇವೆ, ಸದಸ್ಯರ ಸಹಕಾರದಿಂದ ಸಹಕಾರ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಸಹಕಾರಿ ಸಂಸ್ಥೆ ತನ್ನ ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಗಾಗಿ ಒಂದಾಗಿ ಕೆಲಸ ಮಾಡುತ್ತದೆ. ಸಹಕಾರಿ ಸಂಸ್ಥೆ ಬ್ಯಾಂಕುಗಳ ತರಹವೇ ಕೆಲಸ ಮಾಡಿದರೂ, ತನ್ನ ಮುಖ್ಯ ಉದ್ದೇಶ ತಮ್ಮ ಸದಸ್ಯರಿಗೆ ಸಹಾಯ ಮಾಡುವುದನ್ನು ಇರಿಸಿಕೊಂಡಿದೆ. ಹಾಗಾಗಿ ಸಾಲ ಪಡೆದುಕೊಂಡ ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿಸಿ, ಜಮೀನುದಾರರಿಗೆ ಹಾಗೂ ಸಂಘಕ್ಕೆ ಸಹಾಕರ ನೀಡುವ ಮನೋಭಾವ ಬೆಳೆಸಿಕೊಂಡು ಸಹಕಾರಿ ಸಂಘದ ಪ್ರಗತಿಗೆ ಸಹಕರಿಸಿ, ಮಳೆಮಾಪನ ಆಧಾರದಲ್ಲಿ ಬೆಳೆ ವಿಮೆ ನೀಡಲಾಗುತ್ತದೆ ಆದರೆ ಕಾಲಕಾಲಕ್ಕೆ ಮಳೆಮಾಪನಗಳನ್ನು ದುರಸ್ತಿಗೊಳಿಸಿ ಕೃಷಿಕರಿಗೆ ನ್ಯಾಯ ಓದಗಿಸಬೇಕು ಅಲ್ಲದೇ ಸರಕಾರವು ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಸಾಧಕರಿಗೆ ಸನ್ಮಾನ -ಗೌರವ:ಶೈಕ್ಷಣಿಕ ಕ್ಷೇತ್ರ ಸಾಧಕರಾದ ಯಶ್ವಿನಿ ಅಜಿರ, ದಿಶಾ ಬಿ.ಆರ್, ತೃಪ್ತಿ ಕೆ. ಹಾಗೂ ಯೋಗ ಸಾಧಕ ವಿಕಾಸ್ ಅವರನ್ನು ಸನ್ಮಾನಿಸಲಾಯಿತು.ಎಸ್.ಎಸ್.ಎಲ್.ಸಿ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಂಬಳ ಓಟಗಾರ ಚರಣ್ ಪೂಜಾರಿ ಪುತ್ತಿಲ ಹಾಗೂ ಹೈನುಗಾರಿಕೆಗೆ ಕ್ಷೇತ್ರದಲ್ಲಿ ಸಾಧಕ ಚಂದ್ರಶೇಖರ್ ಗೌಡ ಅವರನ್ನು ಸನ್ಮಾನಿಸಲಾಯಿತು. ಕೃಷಿ ಸಾಧಕರಾದ ಕಮಲ ಅಜಿಲ, ಮೋನಪ್ಪ ಗೌಡ ಮನಿಲ, ಸೂರ್ಯನಾರಾಯಣ ಕುದ್ದಣ್ಣಾಯ, ಪಿ.ಕೆ.ಇಬ್ರಾಹಿಂ ಅವರನ್ನು ಸನ್ಮಾನಿಸಲಾಯಿತು. ಸಂಘದ ನಿವೃತ್ತ ಕಾವಲುಗಾರ ಹಿರಿಯರಾದ ಶೇಖಬ್ಬ ಬ್ಯಾರಿ ಅವರನ್ನು ಗೌರವಿಸಲಾಯಿತು. ಉತ್ತಮ ವ್ಯವಹಾರ ನಡೆಸಿದ ಸ್ಪರ್ಶ ನವೋದಯ ಸ್ವಸಹಾಯ ಸಂಘವನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮೋಹನ್ ಗೌಡ, ನಿರ್ದೇಶಕರಾದ ಪ್ರಸನ್ನ ಗೌಡ ಎನ್, ಪ್ರಶಾಂತ್ ಪೈ, ಚಂದ್ರಶೇಖರ್, ಹರ್ಷಿತ್ ಪೂಜಾರಿ, ಸವಿತಾ, ಹೇಮಾವತಿ, ಸುರೇಶ್ ಸುಣ್ಣಾಜೆ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್, ವೃತ್ತಿಪರ ನಿರ್ದೇಶಕರಾದ ಅರುಣ್ ಬಂಗೇರ ಹಾಗೂ ವಸಂತ ಗೌಡ ಉಪಸ್ಥಿತರಿದ್ದರು.ನಿರ್ದೇಶಕರಾದ ಪ್ರವೀಣ್ ರೈ ಪಿ, ಶಿವರಾಮ ಕೆಳಗಿನಂಗಡಿ ಸನ್ಮಾನ ಪತ್ರ ವಾಚಿಸಿದರು.
ನಿರ್ದೇಶಕ ರಾಜೇಶ್ ರೈ ಹೆನ್ನಡ್ಕ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಮೋಹನ್ ಗೌಡ ವಂದಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಗೌಡ ಟಿ ವಾರ್ಷಿಕ ವರದಿ ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ಶಶಿಧರ ಅಡಪ, ಸಿಬ್ಬಂದಿಗಳಾದ ರೋಹಿಣಿ. ಜಿ, ನವೀನ್ ಕುಮಾರ್ ಎಂ, ರತ್ನಾವತಿ, ವೆಂಕಪ್ಪ. ಎ, ಪ್ರವೀಣ್ ಬಿ, ಧನುಷ್, ಅನಿಷಾ, ರಕ್ಷಿತ್ ಸಹಕರಿಸಿದರು.









