ಉಜಿರೆ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಒಟ್ಟು ಲಾಭ 18.86 ಲಕ್ಷ ರೂ

0

ಉಜಿರೆ: ಉಜಿರೆ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ 2025-2026ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 9ರಂದು ಉಜಿರೆಯ ಶ್ರೀ ಶಾರದ ಮಂಟಪದಲ್ಲಿ ಯಶಸ್ವಿಯಾಗಿ ಜರಗಿತು.​

ಸಂಘದ ಅಧ್ಯಕ್ಷೆ ಶಶಿಕಲಾ ಡಿ. ಗೌಡ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಂಘವು ಒಟ್ಟು ರೂ. 4.65 ಕೋಟಿ ದುಡಿಯುವ ಬಂಡವಾಳದೊಂದಿಗೆ ರೂ. 1.39 ಕೋಟಿ ಠೇವಣಿ ಸಂಗ್ರಹಿಸಿದ್ದು, ರೂ. 2.37 ಕೋಟಿ ಸಾಲ ವಿತರಿಸಿದೆ. ಅಲ್ಲದೆ, ರೂ. 14,11,17,204 ವ್ಯವಹಾರ ನಡೆಸಿ ಒಟ್ಟು ರೂ. 18,86,494 ನಿವ್ವಳ ಲಾಭ ಗಳಿಸಿದೆ” ಎಂದು ತಿಳಿಸಿದರು.​ಮುಂದುವರಿದು ಮಾತನಾಡಿದ ಅವರು, ಸಂಘಕ್ಕೆ ಅತ್ಯಂತ ಮುಖ್ಯವಾಗಿ ಸ್ವಂತ ಗೋದಾಮ್ (ಉಗ್ರಾಣ) ಕಟ್ಟಡ ನಿರ್ಮಾಣ ಮಾಡುವ ಮಹತ್ವದ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ತಾತ್ಕಾಲಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕಡ್ಡಾಯ ನೇಮಕಾತಿ ಪ್ರಕ್ರಿಯೆಯ ಮೂಲಕ ಮುಂದುವರಿಸಲಾಗುವುದು ಎಂದು ಪ್ರಮುಖ ಘೋಷಣೆ ಮಾಡಿದರು.​

ಈ ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಪ್ರಮೀಳಾ ಹಾಗೂ ನಿರ್ದೇಶಕರುಗಳಾದ ಪುಷ್ಪಾವತಿ ಆರ್. ಶೆಟ್ಟಿ, ಧನಲಕ್ಷ್ಮೀ, ಯಶೋಧ, ನಳಿನಿ, ಜಯಲಕ್ಷ್ಮೀ, ವಿಮಲ, ಮೋಹಿನಿ ಪಿ.ವಿ., ಮಂಜುಳಾ, ಗುಲಾಬಿ, ಸುಜಾತ ಮತ್ತು ವನಿತಾ ವಿ. ಶೆಟ್ಟಿ ಉಪಸ್ಥಿತರಿದ್ದರು.

​ಸಭೆಯಲ್ಲಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ನಿರ್ದೇಶಕರಾದ ವನಿತಾ ಅವರು ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿದರು. ನಿರ್ದೇಶಕಿ ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ, ಸಿಬ್ಬಂದಿ ನಿಕಿತಾ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸಿಬ್ಬಂದಿ ಮಮತಾ ಪ್ರಾರ್ಥನೆಗೈದರು ಮತ್ತು ಸಭೆಯ ನಡಾವಳಿಗಳನ್ನು ಓದಿ ಸಭೆಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here