ಶೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ತಾಲೂಕಿನ ವಾತ್ಸಲ್ಯ ಸದಸ್ಯರ ಮಕ್ಕಳ ವಿದ್ಯಾರ್ಜನೆಗೆ ವಿಧ್ಯಾನಿಧಿ ವಿತರಣೆ

0

ಬೆಳ್ತಂಗಡಿ : ​ಹೇಮಾವತಿ ಅಮ್ಮನವರ ಕನಸಿನ ಕೂಸಾದ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿರುವ ‘ವಾತ್ಸಲ್ಯ’ ಯೋಜನೆಯು ಸಮಾಜದ ನಿರ್ಗತಿಕರು ಮತ್ತು ಅಂಚಿನಲ್ಲಿರುವ ಕುಟುಂಬಗಳಿಗೆ ಆಸರೆಯಾಗುವ ಮೂಲಕ ಮಾದರಿಯಾಗಿದೆ.

ಸಮಾಜದ ನಿರ್ಗತಿಕರನ್ನು ಗುರುತಿಸಿ ಪ್ರತಿ ತಿಂಗಳು ಮಾಸಾಶನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ, ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ವಿಶೇಷ “ವಿದ್ಯಾನಿಧಿ ಕಿಟ್” ವಿತರಿಸುವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.​ಮಕ್ಕಳು ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಆದರ್ಶ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂಬ ಆಶಯದೊಂದಿಗೆ ತಾಲೂಕಿನ 19 ವಿದ್ಯಾರ್ಥಿಗಳಿಗೆ ಈ ಕಿಟ್‌ಗಳನ್ನು ವಿತರಿಸಲಾಯಿತು.​

ಕಾರ್ಯಕ್ರಮದಲ್ಲಿ ಜಿಲ್ಲೆಯ ನಿರ್ದೇಶಕರಾದ ದಿನೇಶ್ ಡಿ. ಹಾಗೂ ತಾಲೂಕು ಯೋಜನಾಧಿಕಾರಿ ಯಶೋಧರ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸಾಮಗ್ರಿಗಳನ್ನು ವಿತರಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here