







ಉಜಿರೆ: ವಂದೇ ಮಾತರಂ ಗೀತೆಗೆ 150 ವರ್ಷಾಚರಣೆಯ ಪ್ರೇರಣೆಯಿಂದ, ಸೇವಾಭಾರತಿ (ರಿ.), ಕನ್ಯಾಡಿ-ಸೇವಾಧಾಮ, ಬೆಳ್ತಂಗಡಿ ಹಾಗೂ ಶ್ರೀದೇವಿ ಸೇವಾ ಪ್ರತಿಷ್ಠಾನ ಪುಷ್ಪಗಿರಿ ಉರುವಾಲು ಬೆಳ್ತಂಗಡಿ ಇದರ ಸಹಯೋಗದಲ್ಲಿ ದಿವಂಗತ ಡಿ. ಶ್ರೀದೇವಿಯವರ 5ನೇ ವರ್ಷದ ಪುಣ್ಯಸ್ಮರಣೆ ಹಾಗೂ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ವೈದ್ಯಕೀಯ ಕಿಟ್ ಮತ್ತು ಸಾಧನ ಸಲಕರಣೆಗಳ ವಿತರಣಾ ಸಮಾರಂಭ ಉಜಿರೆಯಲ್ಲಿ ನಡೆಯಿತು.
ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಇಂದು ಬೆಳಗ್ಗೆ ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿ, ಸೇವಾ ಭಾರತಿ ಮತ್ತು ಕಿರಣ್ ಪುಷ್ಪಗಿರಿಯವರ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು.ಸೇವಾಭಾರತಿ (ರಿ.), ಕನ್ಯಾಡಿ-ಸೇವಾಧಾಮದ ಅಧ್ಯಕ್ಷ ಕೆ. ವಿನಾಯಕರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ದಕ್ಷಿಣ ಕರ್ನಾಟಕ ಆರ್ ಎಸ್ ಎಸ್ ಸಹ ಪ್ರಾಂತ ಕುಟುಂಬ ಪ್ರಬೋಧನ್ ಪ್ರಮುಖರಾದ ಸುಬ್ರಾಯ ನಂದೋಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪಸಿಂಹ ನಾಯಕ್,ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಿ ಗೌಡ ಎ.ಪುಷ್ಪಗಿರಿ, ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಬಿಜೆಪಿ ಬೆಳ್ತಂಗಡಿಯ ಎಸ್ಸಿ ಮೋರ್ಚಾ ಅಧ್ಯಕ್ಷ ಈಶರ್ ಭೈರ ಹಾಗೂ ಬಿಜೆಪಿ ಬೆಳ್ತಂಗಡಿಯ ಎಸ್ ಟಿ ಮೋರ್ಚಾ ಅಧ್ಯಕ್ಷ ರಾಜೇಶ್ ಎಂ.ಜೆ. ಭಾಗವಹಿಸಿದರು.
ಸೇವಾಧಾಮದ ಸ್ವರ್ಣ ಗೌರಿ,ಭುಜಬಲಿ ಧರ್ಮಸ್ಥಳ, ಕಾರ್ಯಕ್ರಮದಲ್ಲಿ ದಿವ್ಯಾಂಗರಿಗೆ ಅಗತ್ಯವಾದ ವೈದ್ಯಕೀಯ ಕಿಟ್ ಹಾಗೂ ವಿವಿಧ ಸಾಧನ-ಸಲಕರಣೆಗಳನ್ನು ವಿತರಿಸಿದರು. ಈ ವೇಳೆ ಅತಿಥಗಳು ಕಿರಣ್ ಪುಷ್ಪಗಿರಿಯವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.ಕಿರಣ್ ಪುಷ್ಪಗಿರಿಯವರ ಕುಟುಂಬ,ಆಪ್ತ ವರ್ಗ ಕಾರ್ಯಕ್ರಮದಲ್ಲಿ ಭಾಗಿಯಾದರು.









