








ಬೆಳ್ತಂಗಡಿ: ಕೃಷಿ ಪ್ರಶಸ್ತಿಯೋಜನೆಯಡಿಯಲ್ಲಿ ನೀಡಲಾಗುವ ಮುಂಗಾರು 2026-27ನೇ ಸಾಲಿನ ತಾಲೂಕು ಮಟ್ಟದ ಭತ್ತದ ಬೆಳೆ ಸ್ಪರ್ಧೆ (ಪ್ರಶಸ್ತಿ)ಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.ಸ್ಪರ್ಧೆಯ ನಿಯಮಗಳು:ಭತ್ತದ ಬೆಳೆ ಸ್ಪರ್ಧೆಗೆ ಸ್ಪರ್ಧಿಸಲು ರೈತನು ಕನಿಷ್ಠ ವಿಸ್ತೀರ್ಣ 1 ಎಕರೆ ಭತ್ತ ಇರಬೇಕು. ಒಂದು ಬಾರಿ ಪ್ರಶಸ್ತಿ ಪಡೆದ ಕುಟುಂಬದವರು ಪುನಃ 5 ವರ್ಷಗಳವರೆಗೆ ಆ ಹಂತದಸ್ಪರ್ಧೆಗೆ ಭಾಗವಹಿಸುವಂತಿಲ್ಲ. ರೆವಿನ್ಯೂ ದಾಖಲೆ ಪ್ರಕಾರ ಖಾತೆ ಹೊಂದಿರುವ ಹಾಗೂ ಸ್ವತಃ ಬೇಸಾಯದಲ್ಲಿ ತೊಡಗಿರುವ ಸ್ವಯಂ ಕ್ರಿಯಾಶೀಲ ಕೃಷಿಕನಾಗಿರಬೇಕು. ಒಂದು ಕುಟುಂಬದಿಂದ ಒಬ್ಬರು ಮಾತ್ರ ಭಾಗವಹಿಸಬೇಕು. ಕೇಂದ್ರ, ರಾಜ್ಯ ಸರಕಾರಿ ಸೇವೆಯಲ್ಲಿರುವ ಯಾವುದೇ ಇಲಾಖೆ, ವಿಶ್ವವಿದ್ಯಾಲಯ, ಸರಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸುವಂತಿಲ್ಲ. ಈ ಯೋಜನೆಯಲ್ಲಿ ಪ್ರತಿ ಹಂತದಲ್ಲೂ ಮಹಿಳಾ ಮತ್ತು ಪುರುಷ ವಿಭಾಗ ಪ್ರತ್ಯೇಕವಾಗಿದ್ದು, ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.ಬೇಕಾಗುವ ದಾಖಲೆಗಳು: ಎಕರೆ ಮೇಲ್ಪಟ್ಟ ಭತ್ತದ ಪಹಣಿ, ಆಧಾರ್ ಮತ್ತುಬ್ಯಾಂಕ್ ಖಾತೆ ಪುಸ್ತಕದ ಪ್ರತಿ ಮತ್ತು ರೈತರ ಪೊಟೋ. ಆಸಕ್ತ ಭತ್ತ ಬೆಳೆಗಾರರು ಪುತ್ತೂರು ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.








