






ಕನ್ಯಾಡಿ: ಹಿಂದೂ ಧಾರ್ಮಿಕ ಸೇವಾ ಸಮಿತಿ ಕನ್ಯಾಡಿ ಇದರ ಆಶ್ರಯದಲ್ಲಿ ನಡೆಯಲಿರುವ 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಯಶಸ್ವಿಗಾಗಿ ನೂತನ ಸಮಿತಿಯನ್ನು ರಚಿಸಲಾಗಿದ್ದು, ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.



ಅಧ್ಯಕ್ಷರಾಗಿ ಗೋವಿಂದ ಸುವರ್ಣ ಪೊಂಗಾರು,ಪ್ರಧಾನ ಕಾರ್ಯದರ್ಶಿ ಸುಂದರೇಶ್ ಎಂ.ಕೆ,ಕೋಶಾಧಿಕಾರಿ ಗೀತಾ ಕುರ್ಮಾಣಿ ಹಾಗೂ ಕಾರ್ಯಾಧ್ಯಕ್ಷರಾಗಿ ರಾಧೇಶ್ ಗೌಡ ಬಜಿಲ ಮತ್ತು ಮಹಿಳಾ ಸಮಿತಿ ಸಂಯೋಜಕರಾಗಿ ವೇದಾವತಿ ಪೊಂಗಾರು ಮತ್ತು ಇತರ ಸಮಿತಿಗಳಿಗೆ ಪದಾಧಿಕಾರಿಗಳನ್ನು ಇತ್ತೀಚೆಗೆ ಕನ್ಯಾಡಿ ಶಾಲೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಆಯ್ಕೆಮಾಡಲಾಯಿತು.









