ಬೆಳ್ತಂಗಡಿ ರೋಟರಿ‌ ಕ್ಲಬ್ ವತಿಯಿಂದ ಓಣಂ, ರಕ್ಷಾ ಬಂಧನ ಹಬ್ಬಗಳ ಆಚರಣೆ

0

ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಆ. 31 ರಂದು ಓಣಂ ಹಾಗೂ ರಕ್ಷಾ ಬಂಧನ ಹಬ್ನವನ್ನು ಆಚರಿಸಿತು.ಹೋಟೇಲ್ ಓಷಿಯನ್ ಪರ್ಲ್ ನಲ್ಲಿ ನಡೆದ ಅದ್ದೂರಿಯ ಕಾರ್ಯಕ್ರಮದಲ್ಲಿ ರೋಟರಿ ಕುಟುಂಬದ ಎಲ್ಲಾ ಸದಸ್ಯರು ಪಾಲ್ಗೊಂಡರುಮಕ್ಕಳ ದೇಶ ಭಕ್ತಿಗೀತೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು.

ಅಧ್ಯಕ್ಷ ರೊ.ಶ್ರೀಧರ ಕೆ.ವಿ. ಸ್ವಾಗತಿಸಿ ಹಾಗೂ ಕಳೆದ ವಾರ ನಡೆದ ಕಾರ್ಯಕ್ರಮಗಳ ವಿವರವನ್ನು ನೀಡಿದರು . ಇತ್ತೀಚೆಗೆ ಕನ್ನಡ ಪ್ರಭ ಹಾಗೂ ಏಷ್ಯಾ ನೆಟ್ ಸುವರ್ಣ ಚಾನೆಲ್ ನವರ ಹೆಲ್ತ್ ಕೇರ್ ಎಕ್ಸಲೆನ್ಸ್ ಪ್ರಶಸ್ತಿಗೆ ಪಾತ್ರರಾದ ರೊ.ಡಾ.ದಯಾಕರ್ ಎಂ.ಎಂ. ಅವರನ್ನು ಕ್ಲಬ್ ನ ವತಿಯಿಂದ ಸನ್ಮಾನಿಸಲಾಯಿತು. ನಂತರ ರೋಟರಿ ಸದಸ್ಯ ರೊ.ಡಾ.ಶಶಿಧರ ಡೋಂಗ್ರೆ ಹಾಗೂ ಆನ್ ಸುಷ್ಮಾ ಡೋಂಗ್ರೆ , ರೊ.ಗೋಪಾಲಕೃಷ್ಣ ಗುಲ್ಲೋಡಿ ಹಾಗೂ ಆನ್ ಶೋಭಾ ,ರೊ.ವಿವೇಕ್ ಸಂಪತ್ ಆರಿಗ, ಹಾಗೂ ಆನ್ ದೀಪ್ತಿ ಹೆಗ್ಡೆ, ರೊ ಡಾ.ರೋಹನ್ ದೀಕ್ಷಿತ್ ಹಾಗೂ ಆನ್ ಡಾ.ನಿಖಿತಾ ಮಿರ್ಲೆ ಅವರ ವೈವಾಹಿಕ ಜೀವನದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.ಬಳಿಕ ಕೇರಳ ಮಾದರಿಯ ಚೆಂಡೆವಾದನದೊಂದಿಗೆ ಮಹಾಬಲಿಯ ಪ್ರವೇಶ ವಾಯಿತು. ಓಣಂ ಆಚರಣೆಯು ಅಂಗವಾಗಿ ರೋಟರಿ ಹಾಗೂ ಆನ್ಸ್ ಕ್ಲಬ್ ಸದಸ್ಯೆಯರ ತಿರುವಾಧಿರ ನೃತ್ಯ ನಡೆಯಿತು.

ಅತಿಥಿಗಳಾಗಿ ಆಗಮಿಸಿದ ಜಪಾನ್ ದೇಶದ ನಿಯೋಗವೊಂದು ಕಾರ್ಯಕ್ರಮಗಳನ್ನು ಸಂತೋಷದಿಂದ ವೀಕ್ಷಿಸಿದರು.ನಂತರ ಆನ್ಸ್ ಕ್ಲಬ್ ಸದಸ್ಯೆಯರಿಂದ ರಕ್ಷಬಂಧನ ಕಾರ್ಯಕ್ರಮ ನಡೆಯಿತು ಭಾತೃತ್ವದ ಸಂಕೇತವಾದ ಈ ಹಬ್ಬದಲ್ಲಿ ಎಲ್ಲಾ ಸಹೋದರಿಯರು ಅಣ್ಣಂದಿರಿಗೆ ಆರತಿ‌ಮಾಡಿ ಹಣೆಗೆ ತಿಲಕವಿಟ್ಟು ರಕ್ಷೆ ಯನ್ನು ಕಟ್ಟಿದರು ಕಾರ್ಯಕ್ರಮವು ಆನ್ ಸರಸ್ವತಿ ಭಟ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದರೆ, ಕಾರ್ಯದರ್ಶಿ ರೊ.ಡಾ.ರಾಘವೇಂದ್ರ ಪಿದಮಲೆ ವಂದಿಸಿದರು.

ರೊ.ರೇಶ್ಮಾ ಹೆಗ್ಡೆ, ರೊ ಬಿ.ಕೆ. ಧನಂಜಯ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಓಣಂ ಶೈಲಿಯ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

LEAVE A REPLY

Please enter your comment!
Please enter your name here