ಹೋಲಿ ರಿಡೀಮರ್ ಶಿಕ್ಷಕ ರಕ್ಷಕ ಸಂಘಕ್ಕೆ ಪ್ರಿಯಾ ಲೋಬೊ ಉಪಾಧ್ಯಕ್ಷೆಯಾಗಿ ಆಯ್ಕೆ

0

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಶಿಕ್ಷಕ-ರಕ್ಷಕ ಸಂಘದ ಕಾರ್ಯಕಾರಿಣಿ ಸಭೆಯು ಆ.29ರಂದು ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ಕ್ಲಿಫರ್ಡ್ ಪಿಂಟೋರವರು ಸಂಘದ ಜವಾಬ್ದಾರಿ ಮತ್ತು ಕರ್ತವ್ಯಗಳ ಕುರಿತು ವಿವರಿಸಿದರು.

ಸಂಘಕ್ಕೆ ನೂತನ ಉಪಾಧ್ಯಕ್ಷೆಯಾಗಿ ಪ್ರಿಯಾ ಲೋಬೊ ಅವಿರೋಧವಾಗಿ ಆಯ್ಕೆಯಾದರು. ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಶಾಲಾ ಜೊತೆ ಕಾರ್ಯದರ್ಶಿ ವೋಲ್ಟರ್ ಡಿಮೆಲ್ಲೋರವರು ಶಿಕ್ಷಕರ ರಕ್ಷಕ ಸಂಘ ಮತ್ತು ಶಾಲೆಯ ಸಹಭಾಗಿತ್ವದಲ್ಲಿ ಮಕ್ಕಳ ಶಿಕ್ಷಣ ಮತ್ತು ಶಾಲೆ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು. ಕಾರ್ಯದರ್ಶಿ ಸಹ ಶಿಕ್ಷಕಿ ಎಲ್ವಿಟಾ ಪಾಯ್ಸ್ ಗತ ಸಭೆಯ ವರದಿಯನ್ನು ವಾಚಿಸಿದರು. ಸಹ ಶಿಕ್ಷಕಿ ಅನಿತಾ ವಂದಿಸಿದರು.

LEAVE A REPLY

Please enter your comment!
Please enter your name here