






ವೇಣೂರು: ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ-ಬೆಳ್ತಂಗಡಿ, ಎಕ್ಸೆಲ್ ಟೆಕ್ನೋ ಸ್ಕೂಲ್ ವಿದ್ಯೋದಯ ಕ್ಯಾಂಪಸ್ – ವೇಣೂರು ಇದರ ಸಹಯೋಗದೊಂದಿಗೆ, ನಿಟ್ಟಡೆ, ಬಜಿರೆ ಮತ್ತು ಪಡ್ಡoದಡ್ಕ ವಲಯ ಮಟ್ಟದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ಆಗಸ್ಟ್ 29ರಂದು ಎಕ್ಸೆಲ್ ಟೆಕ್ನೋ ಸ್ಕೂಲ್ ನ ಮೈದಾನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ ಬಿ ಉದ್ಘಾಟಿಸಿ, ಎಕ್ಸೆಲ್ ಸಂಸ್ಥೆ ಈ ಬಾರಿ ವಲಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಎರಡೆರಡು ಕ್ರೀಡಾ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಅದಕ್ಕಾಗಿ ಇಲಾಖೆಯ ವತಿಯಿಂದ ಎಕ್ಸೆಲ್ ಸಂಸ್ಥೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ ಅವರು, ಕ್ರೀಡೆ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದರು.



ವಲಯ ಸಂಘಟನಾ ಅಧಿಕಾರಿ ಆರತಿ ಪ್ರಸ್ತಾವನೆ ಗೈದರು. ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಇದರ ಮುಖ್ಯ ಶಿಕ್ಷಕ ಶಾಂತಿರಾಜ್ ಜೈನ್ ಅವರು ಸ್ವಾಗತಿಸಿದರು. ಜಗದೀಶ್ ಬಿ.ಐ. ಇ. ಆರ್.ಟಿ.ಇ ಬೆಳ್ತಂಗಡಿ ತಾಲೂಕು, ನಾರಾವಿ ವಲಯ ಸಂಘಟನಾ ಅಧಿಕಾರಿ ಲೋಕಯ್ಯ ಎನ್, ಸೈಂಟ್ ಪೀಟರ್ ಆಂಗ್ಲ ಮಾಧ್ಯಮ ಶಾಲೆ ಅಳದಂಗಡಿ ಇದರ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ರಾಜ್ಯ ಮಟ್ಟದ ವಾಲಿಬಾಲ್ ತೀರ್ಪುಗಾರ ಕೇವನ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ, ಸಾನ್ವಿ, ಪ್ರಣಮ್ಯ ಎಂ.ಎಸ್, ಹರ್ಷಿತಾ, ಅನ್ವಿತಾ, ಮತ್ತು ರಶ್ಮಿತಾ ದೇವಾಡಿಗ ಪ್ರಾರ್ಥಿಸಿದರು. ಬಾಲಕಿಯರ ವಿಭಾಗದ ಪಂದ್ಯಾಟದಲ್ಲಿ ಕಾಶಿಪಟ್ನ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ , ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ದ್ವಿತೀಯ ಹಾಗೂ ಬಾಲಕರ ವಿಭಾಗದಲ್ಲಿ ನವಚೇತನ ಆಂಗ್ಲ ಮಾಧ್ಯಮ ಶಾಲೆ ವೇಣೂರು ಪ್ರಥಮ ಹಾಗೂ ಸರ್ಕಾರದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ದ್ವಿತೀಯ ಸ್ಥಾನ ಪಡೆಯಿತು.

ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ಇದರ ಶಿಕ್ಷಣ ಸಂಯೋಜಕಿ ಕಾವ್ಯಶ್ರೀ ಎನ್. ವಿಜೇತರನ್ನು ಅಭಿನಂದಿಸಿದರು. ಸಮಾಜ ವಿಜ್ಞಾನ ಶಿಕ್ಷಕ ದಾಮೋದರ್ ಸಮಗ್ರ ನಿರ್ವಹಣೆ ಮಾಡಿದರು. ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಸಹಕರಿಸಿದರು. ಕನ್ನಡ ಶಿಕ್ಷಕಿ ಅಕ್ಷತ ನಿರೂಪಿಸಿದ ಸಭೆಗೆ, ಕನ್ನಡ ಶಿಕ್ಷಕ ಅಶೋಕ್ ಧನ್ಯವಾದವಿತ್ತರು.









