ಮಡಂತ್ಯಾರು: ವಿಶ್ವಕರ್ಮ ಸಭಾಭವನದಲ್ಲಿ ವರಮಹಾಲಕ್ಷ್ಮಿ ಪೂಜೆ

0

ಮಡಂತ್ಯಾರು : ವಿಶ್ವಕಲಾ ಮಹಿಳಾ ಮಂಡಳಿ (ಗಾಯತ್ರಿನಗರ, ಮಡಂತ್ಯಾರ್) ಇದರ ಆಶ್ರಯದಲ್ಲಿ ವಿಶ್ವಕರ್ಮ ಸಭಾಭವನದಲ್ಲಿ ವರಮಹಾಲಕ್ಷ್ಮಿ ಪೂಜೆಯು ನೆರವೇರಿತು.

​ಪ್ರಕಾಶ್ ಪುರೋಹಿತ್ ಅವರ ಆಚಾರತ್ವದಲ್ಲಿ ಹಾಗೂ ಕಾವ್ಯ ರಕ್ಷಿತಾ ಆಚಾರ್ಯ ದಂಪತಿಗಳ ಯಜಮಾನತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಅದ್ದೂರಿಯಾಗಿ ಜರುಗಿದವು.​

ಕಾರ್ಯಕ್ರಮದಲ್ಲಿ ಮಂಡಳಿಯ ಗೌರವಾಧ್ಯಕ್ಷ ತುಳಸಿ.ಪಿ ಆಚಾರ್ ಅರ್ತಿಲ, ಅಧ್ಯಕ್ಷ ವೇದಾವತಿ ಶ್ರೀಧರಾಚಾರ್ಯ ಪೆದ್ಯಾರ್, ಕಾರ್ಯದರ್ಶಿ ಸವಿತಾ ಪ್ರವೀಣ್ ಆಚಾರ್ಯ ಎನ್.ಸಿ ರೋಡ್, ಕೋಶಾಧಿಕಾರಿ ಪುಷ್ಪ ಪ್ರಭಾಕರ್ ಆಚಾರ್ಯ ಮಡಕ್ಕಿಲ ಹಾಗೂ ಸಂಘದ ಸರ್ವ ಸದಸ್ಯರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದು ದೇವರ ಕೃಪೆಗೆ ಪಾತ್ರರಾದರು.

LEAVE A REPLY

Please enter your comment!
Please enter your name here