







ಬೆಳ್ತಂಗಡಿ : ಬೆಳ್ತಂಗಡಿ ಟೈಲರ್ಸ್ ಸಹಕಾರ ಸಂಘದ ಸ್ಥಳಾಂತರಿತ ನೂತನ ಕಚೇರಿಯಉದ್ಘಾಟನೆಯು ಸಿ.ಎಸ್. ಕಾಂಪ್ಲೆಕ್ಸ್ ಮುಖ್ಯರಸ್ತೆ ಬೆಳ್ತಂಗಡಿ (ಸೋಜ ಎಲೆಕ್ಟ್ರಾನಿಕ್ಸ್ ಬಳಿ) ಆ.19ರಂದು ನಡೆಯಿತು.
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ)ಅಧ್ಯಕ್ಷ ಹರೀಶ್ ಕುಮಾರ್ ಉದ್ಘಾಟನೆ ನೆರವೇರಿಸಿ ವಾಣಿಜ್ಯ ಬ್ಯಾಂಕ್ ಗಳಲ್ಲಿ ವ್ಯವಹಾರಿಸಲು ಆಗದೆ ಇರುವ ಈ ಕಾಲದಲ್ಲಿ ಟೈಲರ್ಸ್ ಸಹಕಾರಿ ಸಂಘ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದೆ. ಈ ಸಹಕಾರಿ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.
ಬೆಳ್ತಂಗಡಿ ಟೈಲರ್ಸ್ ಸಹಕಾರ ಸಂಘದ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.ಭದ್ರತಾ ಕೊಠಡಿ ಉದ್ಘಾಟನೆಯನ್ನು ಕಥೋಲಿಕ್ ಕ್ರೆಡಿಟ್ ಬೆಳ್ತಂಗಡಿ ಸಹಕಾರ ಸಂಘದ ಅಧ್ಯಕ್ಷ ಹೆನ್ರಿ ಲೋಬೊ,ಗಣಕಯಂತ್ರವನ್ನು ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿಶ್ರೀಮತಿ ಪ್ರತಿಮಾ ಬಿ. ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ. ಕುಶಾಲಪ್ಪ ಗೌಡ, ಮುಖ್ಯಕಾರ್ಯನಿರ್ವಹಣಾಧಿಕಾರಿ ರೋಲ್ಸನ್ ಜೋಯಲ್ ಮೋರಸ್,ನಿರ್ದೇಶಕರುಗಳಾದ ಎನ್. ವಸಂತ್,ಸದಾನಂದ ಶೆಟ್ಟಿ, ವಲೇರಿಯನ್ ಪಾಯ್ಸ್, ವಸಂತ ಪೂಜಾರಿ, ರಾಜು ಪೂಜಾರಿ, ಜೋಸೆಫ್ ಡಿ’ಸೋಜ, ಶಾಂಭವಿ ಪಿ. ಬಂಗೇರ, ಶಶಿಕಲಾ ಗೋಪಾಲ್, ಪಾರ್ವತಿ ಎ., ಉಷಾ ಹಾಗೂ ಸಿಬ್ಬಂದಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಕುಶಲಪ್ಪ ಗೌಡ ವಂದಿಸಿದರು.


ವಿನ್ಯಾಸ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಗುರುದೇವ ಸಹಕಾರಿ ಸಂಘದ ವಿಶೇಷ ಅಧಿಕಾರಿ ಮೋನಪ್ಪ ಕಂಡೆತ್ಯಾರು. ಸಿ ಇ ಓ ಅಶ್ವಥ್, ಸೀನಿಯರ್ ಮ್ಯಾನೇಜರ್ ಕೀರ್ತನ್, ಕ್ಯಾಥೋಲಿಕ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಸಿ ಇ ಓ ಐ ವಾನ್ ಗೊಂಸಾಲ್ವಿಸ್, ಇಂಜಿನಿಯರ್ ಅಲನ್ ಡಿಸೋಜ ಉಪಸ್ಥಿತರಿದ್ದರು.
ಸಂಘದ ಹಿನ್ನೆಲೆ: ಹತ್ತು ವರ್ಷಗಳ ಹಿಂದೆ ಸಹಕಾರ ಕ್ಷೇತ್ರದಲ್ಲಿ ಅನುಭವಿ ವಲೇರಿಯನ್ ರೊಡ್ರಿಗಸ್ ಇವರ ನೇತ್ರತ್ವದಲ್ಲಿ ಟೈಲರ್ ವೃತ್ತಿ ಬಾಂದವರ ಏಳಿಗೆಗಾಗಿ ಬೆಳ್ತಂಗಡಿ ಟೈಲರ್ಸ್ ಸಹಕಾರ ಸಂಘವನ್ನು ಪ್ರಾರಂಭವಾಹಿತು. ಟೈಲರ್ಸ್ ವೃತ್ತಿ ಬಾಂದವರು ಸ್ಥಾಪಿಸಿದ ಈ ಸಹಕಾರ ಸಂಘವು ಕರ್ನಾಟಕ ರಾಜ್ಯದಲ್ಲೇ ಪ್ರಥಮ ಟೈಲರ್ಸ್ ಸಹಕಾರ ಸಂಘವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಂಘ ಆರಂಭಗೊಂಡ ಕೆಲವೇ ದಿನಗಳಲ್ಲಿ ಕೇಂದ್ರ ಸರಕಾರವು ಒಂದು ಸಾವಿರ ಮತ್ತು ಐದುನೂರರ ನೋಟುಗಳನ್ನು ಹಿಂದಕ್ಕೆ ಪಡೆಯಿತು. ಇಂತಹ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಿದ ಸಂಘವು ಉತ್ತಮ ಬೆಳವಣಿಗೆಯನ್ನು ದಾಖಲಿಸುತ್ತಾ ಎತ್ತರಕ್ಕೆ ಬೆಳೆಯಲಾರಂಭಿಸಿತು.
ಹತ್ತು ವರ್ಷಗಳ ಹಿಂದೆ ಕನಿಷ್ಟ ಠೇವಣಿಯೊಂದಿಗೆ ಆರಂಭಗೊಂಡ ಈ ಸಂಘವುಪ್ರಸಕ್ತ 22ಕೋಟಿ ದುಡಿಯುವ ಬಂಢವಾಳ ಹೊಂದಿದ್ದು 17ಕೋಟಿ ಸಾಲ ವಿತರಿಸಿದ್ದು ಸುಮಾರು 75ಕೋಟಿ ರೂಪಾಯಿ ವಾರ್ಷಿಕವ್ಯವಹಾರ ನಡೆಸಿರುತ್ತದೆ. ವಸೂಲಾತಿಯಲ್ಲಿ ಶೇಕಡಾ 95 ಸಾಧನೆ ದಾಖಲಿಸಿದ್ದು ಪ್ರತೀ ವರ್ಷ ‘ಎ’ ಗ್ರೇಡ್ ಗಳಿಸಿರುತ್ತದೆ.









