







ಬಳಂಜ. ಶ್ರೀ ಕ್ಷೇತ್ರ ಧರ್ಮಸ್ಥಳ ವಿಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ‘ರಿ ‘ ಗುರುವಾಯನಕೆರೆ ತಾಲೂಕು ಇದರ ನೇತೃತ್ವದಲ್ಲಿ ಬಳಂಜ ಬಿ ಒಕ್ಕೂಟದ ವತಿಯಿಂದ ಬಳಂಜ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.



ಕಾರ್ಯಕ್ರಮದಲ್ಲಿ ಬಳಂಜ ಬಿ ಒಕ್ಕೂಟ ದ ಅಧ್ಯಕ್ಷ ರಾದ ಕೆ. ಎ ಅಬುಬಕ್ಕರ್ ದುರ್ಗಾಪರಮೆಶ್ವರಿ ದೇವಸ್ಥಾನದ ಅರ್ಚಕರಾದ ಮಂಜುನಾಥ ಭಟ್ ಹಾಗೂ ರಾಘವೇಂದ್ರ ಭಟ್,ವಲಯದ ಮೇಲ್ವಿಚಾರಕರಾದ ಸಂದೇಶ್ ಸೇವಾ ಪ್ರತಿನಿಧಿ ಪ್ರಮೀಳಾ ಆಚಾರ್ಯ ನಿಕಟಪೂರ್ವ ಒಕ್ಕೂಟ ದ ಅಧ್ಯಕ್ಷ ರಾದ ಪ್ರಮೋದ್ ದೇವಾಡಿಗ, ಪ್ರಜ್ಞಾ ಜ್ಞಾನವಿಕಾಸದ ಸದಸ್ಯರು ಒಕ್ಕೂಟದ ಸದಸ್ಯರು ಭಾಗವಹಿಸಿದರು.









